ದೇವದುರ್ಗ; ಶಾದಿ ಮಹಲ್ ಕಮಿಟಿಗೆ ನೇಮಕ
ದೇವದುರ್ಗ: ಪಟ್ಟಣದ ಶಾದಿ ಮಹಲ್ ಕಮಿಟಿಯ ನೂತನ ಅಧ್ಯಕ್ಷರಾಗಿ ಫಾರೂಖ್ ಅಹ್ಮದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜಾಮೀಯಾ ಮಸ್ಜೀದ್ನಲ್ಲಿ ಶುಕ್ರವಾರ ಮುಸ್ಲಿಂ ಸಮಾಜದ ಮುಖಂಡರು, ಜಾಮೀಯಾ ಮಸ್ಜೀದ್ ಅಧ್ಯಕ್ಷ ಅನ್ವರ ಹುಸೇನ್ ದುಬೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಟ್ಟಣ ವ್ಯಾಪ್ತಿಯ 10 ಮಸೀದಿಗಳಿಂದ ತಲಾ ಇಬ್ಬರು ಸದಸ್ಯರನ್ನು ಆಯ್ಕೆ ಮಾಡಲಾಯಿತು. ಅದೇ ರೀತಿ ಶಾದಿ ಮಹಲ್ ಕಮಿಟಿಯ ಅಧ್ಯಕ್ಷರಾಗಿ ಫಾರೂಖ್ ಅಹ್ಮದ್ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಅಮೀನಬಾಷಾ ಸಾಬ್ ಗೌರಂಪೇಟ, ಕಾರ್ಯದರ್ಶಿಯಾಗಿ ಜಿಲಾನಿ ಪಾಶಾ ಹಾಗೂ ಖಜಾಂಚಿಯಾಗಿ ಮಹ್ಮದ ಗೌಸ್, ಮಹ್ಮದ್ ಜಾಕೀರ ಹುಸೇನ್ ಅವರು ಕಾನೂನು ಸಲಹೆಗಾರರಾಗಿ ಅವಿರೋಧವಾಗಿ ಆಯ್ಕೆಯಾದರು. ಪ್ರಮುಖರಾದ ಯಕ್ಬಾಲ್ ಸಾಬ್ ಹೌದುಡಿ, ಅಬ್ದುಲ್ ಅಜೀಜ್, ಅನ್ವರಸಾಬ್ ಡ್ರೈವರ್, ಇಸ್ಮಾಯಿಲ್ ಖಾನ್ ಸಾಬ್, ಮಹ್ಮದ್ ಹನೀಫ್, ಮಹ್ಮದ್ ಉಸ್ಮಾನ್, ಸಜ್ಜಾದುಲ್ ಹಸನ್, ನಿವೃತ್ತ ಶಿಕ್ಷಕ ರಶೀದ್ ಸಾಬ್ ನಾಗುಂಡಿ, ಇಸ್ಮಾಯಿಲ್ ಸಾಬ್ ಖುರೇಶಿ, ಅನೂರಿ ರಫೀಕ್ ಸಾಬ್, ಅಮ್ಜದ್ ಅಲಿ, ಎಸ್ಡಿಪಿಐ ಅಧ್ಯಕ್ಷ ಅಬ್ದುಲ್ ಮಜೀದ್ ಸೇರಿ ಅನೇಕರಿದ್ದರು.