ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮಸ್ಕಿ ನಾಲಾ ಅಣೆಕಟ್ಟೆಗೆ ಹರಿದು ಬಂದ ನೀರು

Mainashree
Updated On : 8 Jun 2013, 11:53 am

ಕನ್ನಡಪ್ರಭ ವಾರ್ತೆ  ರಾಯಚೂರು  ಜೂ.7
ಜಿಲ್ಲೆಯಲ್ಲಿನ ಭೀಕರ ಬರದಿಂದಾಗಿ ಕಳೆದ ಎರಡು ವರ್ಷಗಳಿಂದ ಬಹುತೇಕ ನೀರಿಲ್ಲದೇ ಬರಿದಾಗಿದ್ದ ಲಿಂಗಸ್ಗೂರು ತಾಲೂಕಿನ ಮಸ್ಕಿಯ ಮಸ್ಕಿ ನಾಲಾ ಯೋಜನೆಯ ಅಣೆಕಟ್ಟೆಯಲ್ಲೀಗ ನೀರು ಸಂಗ್ರಹಗೊಂಡಿದ್ದು, ರೈತರಲ್ಲಿ ಆಶಾಕಿರಣ ಮೂಡಿದೆ.
ಕಳೆದ ಎರಡು ದಿನಗಳ ಹಿಂದೆ ಮಸ್ಕಿ ನಾಲಾ ಯೋಜನೆಯ ಪ್ರದೇಶದಲ್ಲಿ ಮುಂಗಾರು ಆರಂಭದಲ್ಲಿಯೇ ಸುರಿದ ಭಾರೀ ಮಳೆಯಿಂದಾಗಿ ಕಳೆದ ಎರಡು ದಿನಗಳಲ್ಲಿ ಅಣೆಕಟ್ಟೆಗೆ ಭಾರೀ ಪ್ರಮಾಣದಲ್ಲಿ ನೀರು ಹರಿದುಬಂದಿದ್ದು, ಸದ್ಯ ಜಲಾಶಯದಲ್ಲಿ 10 ಅಡಿ ನೀರು ಸಂಗ್ರಹಗೊಂಡಿದೆ.
ಮಸ್ಕಿ ನಾಲಾ ಯೋಜನೆಯಡಿ 7500 ಎಕರೆ ಪ್ರದೇಶ ನೀರಾವರಿ ಸೌಲಭ್ಯ ಹೊಂದುತ್ತದೆ. ಜಲಾಶಯದಲ್ಲಿ ಕಳೆದ ಎರಡು ವರ್ಷಗಳಿಂದ ಭೀಕರ ಬರದ ಹಿನ್ನೆಲೆಯಲ್ಲಿ ನೀರಿನ ಸಂಗ್ರಹ ತಳಕಚ್ಚಿತ್ತು. ಅದರಿಂದಾಗಿ ಜಲಾಶಯವನ್ನೇ ನೆಚ್ಚಿಕೊಂಡಿದ್ದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಆದರೆ ಈ ಬಾರಿ ಮುಂಗಾರು ಜಿಲ್ಲೆಯನ್ನು ಪ್ರವೇಶಿಸುವ ಮೊದಲೇ ಸುರಿದ ಮಳೆಗೆ ಜಲಾಶಯದಲ್ಲಿ ನೀರು ಸಂಗ್ರಹಗೊಂಡಿದ್ದು ರೈತರಲ್ಲಿ ಸಂತಸ ತಂದಿದೆ. ರೈತರು ಕೃಷಿ ಕಾರ್ಯದಲ್ಲಿ ತೊಡಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement