ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಂಕ್ಷಿಪ್ತ ಸುದ್ದಿ

Mainashree
Updated On : 8 Jun 2013, 11:54 am

ಕಾಮಗಾರಿ ಪರಿಶೀಲನೆ
ಸಿಂಧನೂರು:
ತಾಲೂಕಿನ ಹೊಸಳ್ಳಿ (ಇಜೆ) ಕ್ಯಾಂಪ್‌ನಲ್ಲಿ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಳಿಸಿ ಶೀಘ್ರದಲ್ಲಿ ಕೆರೆಗೆ ನೀರು ತುಂಬಿಸಲು ವ್ಯವಸ್ಥೆ ಮಾಡಬೇಕೆಂದು ಶಾಸಕ ಹಂಪನಗೌಡ ಬಾದರ್ಲಿ ಸೂಚಿಸಿದರು. ಅವರು ಗ್ರಾಮದಲ್ಲಿ ಕುಡಿವ ನೀರಿನ ಕೆರೆ ನಿರ್ಮಾಣ ಕಾಮಗಾರಿ ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಈಗಾಗಲೇ ಕೆರೆ ಕಾಮಗಾರಿ ಪೂರ್ಣಗೊಂಡು ಕುಡಿಯುವ ನೀರಿಗೆ ಅನುಕೂಲವಾಗಬೇಕಿತ್ತು. ನಿಷ್ಕಾಳಜಿಯಿಂದ ಯೋಜನೆ ನನೆಗುದಿಗೆ ಬಿದಿದ್ದೆ. ಕೂಡಲೇ ಪೈಪ್ ಲೈನ್ ಕಾಮಗಾರಿ ಕೈಗೊಂಡು ನೀರು ಸರಬರಾಜು ವ್ಯವಸ್ಥೆ ಮಾಡಿಕೊಳ್ಳಬೇಕು. ಆಮೆಗತಿಯಲ್ಲಿ ನಡೆಯುತ್ತಿರುವ ಕಾಮಗಾರಿ ತೀವ್ರಗೊಳಿಸಿ ಬೇಗನೆ ಮುಗಿಸಿಕೊಡಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ನಗರಸಭೆ ಸದಸ್ಯರಾದ ಶೇಖರಪ್ಪ ಗಿಣಿವಾರ, ಜಾಫರ್ ಅಲಿ ಜಾಗೀರದಾರ, ಕೃಷ್ಣಾರೆಡ್ಡಿ ಹೊಸಳ್ಳಿ ಮತ್ತಿತರರು ಇದ್ದರು.

ಮುಖ್ಯಗುರು ಹುದ್ದೆಗೆ ಬಡ್ತಿ: ಸೂಚನೆ
ರಾಯಚೂರು
: ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಹುದ್ದೆಯಲ್ಲಿ ನಿಯಮ 32ರ ಅಡಿ ಕರ್ತವ್ಯ ನಿರ್ವಹಿಸುತ್ತಿರುವ ಹಾಗೂ ಗ್ರೇಡ್ -2 ಪ್ರೌಢಶಾಲೆ ಶಿಕ್ಷಕರಿಗೆ ಮುಖ್ಯಗುರುಗಳ ಹುದ್ದೆಗೆ ಬಡ್ತಿ ನೀಡಿಕೆಗೆ ಸಂಬಂಧಿಸಿ ಪಟ್ಟಿ ಪ್ರಕಟಿಸಿದ್ದು, ದಾಖಲಾತಿಸಲ್ಲಿಸಲು ಸೂಚಿಸಲಾಗಿದೆ. ಸರ್ಕಾರಿ ಪ್ರೌಢ ಶಾಲಾ ಮುಖ್ಯ ಗುರುಗಳ ವೃಂದಕ್ಕೆ ಬಡ್ತಿ ನೀಡುವುದಕ್ಕೆ ಸಂಬಂಧಿಸಿ ಅಂತಿಮ ಜೇಷ್ಠತಾ ಪಟ್ಟಿಯಲ್ಲಿರುವ  ಶಿಕ್ಷಕರು ತಮ್ಮ ಗೌಪ್ಯ ವರದಿ ಹಾಗೂ ಇತರೆ ಮಾಹಿತಿಯನ್ನು ಡಿಡಿಪಿಐ ಕಚೇರಿಗೆ ಜೂ.10ರೊಳಗೆ ಸಲ್ಲಿಸಲು ಸೂಚಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement