ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬಾದರ್ಲಿ ಕುಟುಂಬದ ಮದುವೆ: ಕಾಲೇಜು ಮುಂದೆ ಗಲೀಜು

Mainashree
Updated On : 9 Jun 2013, 11:41 am

ಸಿಂಧನೂರು: ಶಾಸಕ ಹಂಪನಗೌಡ ಬಾದರ್ಲಿ ಕುಟುಂಬದವರ ಮದುವೆ ಅದ್ಧೂರಿಯಾಗಿ ಮುಗಿದಿದೆ. ಆದರೆ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜ್ ಮುಂದೆ ತ್ಯಾಜ್ಯ ವಸ್ತುಗಳು ವಿಲೇವಾರಿಯಾಗದೆ ಹಾಗೆ ಬಿದ್ದಿವೆ.
ಮಜ್ಜಿಗೆ ಪಾಕೀಟುಗಳು, ಹೊಲಸು ನೀರು ಕಾಲೇಜ್ ಮೆಟ್ಟಿಲುಗಳ ಬಳಿ ದುರ್ವಾಸನೆ ಹರಡಿದೆ. ಜೂನ್ 1ರಿಂದ ಕಾಲೇಜು ಪ್ರವೇಶಾವಕಾಶ ಆರಂಭವಾಗಿವೆ. ಮುಂಭಾಗದಲ್ಲಿನ ವಾತಾವರಣ ಗಮನಿಸಿದವರಿಗೆ ಇದು ಕಾಲೇಜೋ ಅಲ್ಲವೋ ಎನ್ನುವ ಅನುಮಾನ ಬರುವಂತಿದೆ.
ಬಾದರ್ಲಿ ಕುಟುಂಬದವರು ರಜೆಯ ಸಂದರ್ಭದಲ್ಲಿ ಮದುವೆಗೆಂದು ಕಾಲೇಜಿನ ಕೊಠಡಿಗಳನ್ನು ಬಳಸಿಕೊಂಡಿದ್ದಾರೆ. ಆದರೆ ಕಾಲೇಜು ಆರಂಭವಾದರೂ ಇಲ್ಲಿಯವರೆಗೂ ಸ್ವಚ್ಛತೆ ಕಾಪಾಡುವುದನ್ನು ಮರೆತಿದ್ದಾರೆಂದು ವಿದ್ಯಾರ್ಥಿ ಪಾಲಕರೊಬ್ಬರು ಆರೋಪಿಸಿದರು.
ಕಾಲೇಜಿನ ಮುಂದೆ ಮದುವೆ ಕಾರಣ ಗಲೀಜು ವಾತಾವರಣ ನಿರ್ಮಾಣವಾಗಿದೆ. ಪ್ರವೇಶಾವಕಾಶ ಬಯಸಿ ಬರುವ ವಿದ್ಯಾರ್ಥಿ ಮತ್ತು ಪಾಲಕರಿಗೆ ಇದರಿಂದ ಅಸಮಾಧಾನವಾಗುತ್ತಿದೆ. ಖಾಸಗಿ ಕಾಲೇಜುಗಳ ಭರಾಟೆ ಹೆಚ್ಚಿರುವ ಸಂದರ್ಭದಲ್ಲಿ ಇರುವ ಎರಡೇ ಮಹಿಳಾ ಪಿಯು ಕಾಲೇಜುಗಳ ಸುತ್ತಮುತ್ತಲಿನ ಪರಿಸರ ಅಸಹ್ಯಕರವಾಗಿದ್ದರೆ, ವಿದ್ಯಾರ್ಥಿನಿಯರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲವೇ ಎಂದು ಇನ್ನೋರ್ವ ಪಾಲಕರು ಅಸಮಾಧಾನ ವ್ಯಕ್ತಪಡಿಸಿದರು.
ಮೈದಾನದ ತುಂಬೆಲ್ಲಾ ತಗ್ಗುದಿನ್ನೆ: ಬಾದರ್ಲಿ ಕುಟುಂಬದವರ ಮದುವೆ ಮುಗಿದು ವಾರ ಸಮೀಪಿಸುತ್ತಿದ್ದರೂ ಬೃಹತ್ ಪೆಂಡಾಲಿನ ಸಾಮಾನುಗಳನ್ನು ಇಲ್ಲಿಯವರೆಗೂ ಸಾಗಿಸಲಾಗಿಲ್ಲ. ಮೈದಾನದ ತುಂಬೆಲ್ಲಾ ವಾಹನಗಳು ಓಡಾಡಿದ್ದರಿಂದ ಸಮತಟ್ಟಾಗಿದ್ದ ಮೈದಾನದಲ್ಲಿ ತಗ್ಗುದಿನ್ನೆಗಳು ಬಿದ್ದಿವೆ. ಇದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳ ಆಟೋಟಗಳಿಗೆ ತೊಂದರೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement