ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಇಂದು ರಕ್ತದಾನ ಶಿಬಿರ ಆಯೋಜನೆ

Lingaraj Badiger
Updated On : 10 Jun 2013, 11:32 am

ರಾಯಚೂರು: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರ 47ನೇ ಜನ್ಮದಿನದ ಅಂಗವಾಗಿ ಜೂ.10ರಂದು ಜಿಲ್ಲಾ ಘಟಕದಿಂದ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಈ ಕುರಿತು ನಗರದಲ್ಲಿ ಭಾನುವಾರ ಕರೆದಿದ್ದ ಸಭೆಯಲ್ಲಿ ಜಿಲ್ಲಾಧ್ಯಕ್ಷ ವಿನೋದರೆಡ್ಡಿ ಮಾತನಾಡಿ, ಸಂಘಟನೆಯ ರಾಜ್ಯಾಧ್ಯಕ್ಷರ ಜನ್ಮದಿನವನ್ನು ಇದುವರೆಗೆ ನಗರದ ಅನಾಥ ಮಕ್ಕಳು, ಅಂಥ ಮಕ್ಕಳು ಜತೆ ಆಚರಿಸಿದ್ದು, ಈಚೆಗೆ ಅಪಘಾತಗಳು ಹೆಚ್ಚುತ್ತಿದ್ದು, ತುರ್ತು ಸಂದರ್ಭದಲ್ಲಿ ರಕ್ತದ ಕೊರತೆ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಜೂ.10ರಂದು ಆಚರಿಸುವ ಜನ್ಮದಿನದ ಸಂದರ್ಭ ರಕ್ತದಾನ ಶಿಬಿರ ಆಯೋಜಿಸಲು ಸೂಚಿಸಿದರು. ನಗರದ ಐಎಂಎ ಹಾಲ್‌ನಲ್ಲಿ ಜೂ.10ರಂದು ಬೆಳಗ್ಗೆ 10ಕ್ಕೆ ಸಂಘಟನೆಯ ಎಲ್ಲ ಕಾರ್ಯಕರ್ತರು ಆಗಮಿಸಿ ರಕ್ತದಾನ ಶಿಬಿರದಲ್ಲಿ ಪಾಲ್ಗೊಳ್ಳಬೇಕು. ಶಿಬಿರದ ಸಾನಿಧ್ಯವನ್ನು ಕಿಲ್ಲೆ ಬ್ರಹನ್ಮಠದ ಶಾಂತಮಲ್ಲ ಶಿವಾಚಾರ್ಯರು ವಹಿಸಲಿದ್ದು, ಜಿಲ್ಲೆಯ ಖ್ಯಾತ ಸಾಹಿತಿ ಭಗತರಾಜ್ ನಿಜಾಮಕರ್ ಶಿಬಿರಕ್ಕೆ ಚಾಲನೆ ನೀಡಲಿದ್ದಾರೆಂದು ಸಭೆಗೆ ತಿಳಿಸಿದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ್ ಪಾಟೀಲ್ ಶಾವಂತಗೇರಾ, ಡಾ.ವೆಂಕಟೇಶ್ ನಾಯಕ, ಡಾ.ಸಿ.ಎನ್. ಕುಲಕರ್ಣಿ ಸೇರಿದಂತೆ ಅನೇಕ ಪ್ರಮುಖರು ಪಾಲ್ಗೊಳ್ಳಲಿದ್ದಾರೆಂದರು..
ಉಚಿತ ತರಬೇತಿಗೆ ಅರ್ಜಿ ಆಹ್ವಾನ
ಸಿಂಧನೂರು: ಲಾರ್ಸನ್ ಮತ್ತು ಟರ್ಬೋ ಕಂಪನಿಯಿಂದ ನಿರೋದ್ಯೋಗಿಗಳಗೆ ಜೂ.20 ರಂದು ನಿರ್ಮಾಣ ಕೌಶಲ್ಯ ತರಬೇತಿ ಸಂಸ್ಥೆ ಬೆಂಗಳೂರಿನ ಮುಖಾಂತರ ಉಚಿತ ತರಬೇತಿ ಹಾಗೂ ಉದ್ಯೋಗ ಮೇಳ ಸಂಘಟಿಸಲಾಗುವುದೆಂದು ಸಾಧನಾ ಸಂಸ್ಥೆ ಕಾರ್ಯದರ್ಶಿ ಶರಣಪ್ಪ ಬರಸಿ ವಕೀಲರು ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಆಸಕ್ತರು ತಮ್ಮ ವಿದ್ಯಾರ್ಹತೆ, ವಾಸಸ್ಥಳ ಪತ್ರ, ಭಾವಚಿತ್ರ ಹಾಗೂ ಸಂಬಂಧಿಸಿದ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಕನಿಷ್ಟ 5ನೇ ತರಗತಿ ಉತ್ತೀರ್ಣರಾಗಿರಬೇಕು. ಎತ್ತರ 155 ಸೆಂ.ಮಿ. ಗಿಂತ ಹೆಚ್ಚಿರಬೇಕು. 45 ಕಿಲೋಗಿಂತ ಹೆಚ್ಚು ತೂಕವಿರಬೇಕು. ಈ ಎಲ್ಲಾ ಅರ್ಹತೆ ಹೊಂದಿದವರಿಗೆ ಉಚಿತ ಹಾಸ್ಟೆಲ್ ವಸತಿ ಸೌಲಭ್ಯ , ಹಾಜರಾತಿ ಅನುಗುಣವಾಗಿ ಪ್ರತಿತಿಂಗಳು ರು. 1700 ಭತ್ಯೆ, ಎರಡು ಜೊತೆ ಉಚಿತ ಸಮವಸ್ತ್ರ, ಶೂಗಳು, ಹೆಲ್ಮೆಟ್ ಡಬ್ಲೂಆರ್‌ಸಿ ಗುರ್ತಿನ ಪತ್ರ ಮತ್ತು ಸರ್ಟಿಫಿಕೇಟ್ ನೀಡಲಾಗುವುದು. ತರಬೇತಿ ನಂತರ ಆಸಕ್ತರು ಇಷ್ಟಪಟ್ಟರೆ ಎಲ್ ಅಂಡ್, ಕಂಪನಿಯಲ್ಲಿ ರು. 7000-8000 ಸಾವಿರದವರೆಗೆ ವೇತನ ನೀಡಲಾಗುವುದೆಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement