ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನಕಲಿ ಬಿತ್ತನೆ ಬೀಜ: ವ್ಯಕ್ತಿ ಬಂಧನ

Lingaraj Badiger
Updated On : 10 Jun 2013, 11:32 am

ರಾಯಚೂರು: ತಾಲೂಕಿನ ಕೊತ್ತದೊಡ್ಡಿ ಗ್ರಾಮದಲ್ಲಿ ನಕಲಿ ಹತ್ತಿ ಬಿತ್ತನೆ ಬೀಜಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕೆ.ತಿಪ್ಪಯ್ಯ ಎಂದು ಗುರುತಿಸಲಾಗಿದೆ. ಈತ ಗ್ರಾಮದ ತನ್ನ ಮನೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ನಕಲಿ ಹತ್ತಿ ಬೀಜಗಳನ್ನು ಮಾರಾಟ ಮಾಡುತ್ತಿದ್ದ ವೇಳೆ ದಾಳಿ ಮಾಡಿದ ಪೊಲೀಸರು ಪಲ್ಲವಿ ಸೀಡ್ಸ್ ಪ್ರೀಮಿಯಂ ಹೈಬ್ರೀಡ್ ಕಾಟನ್ ಬಿತ್ತನೆ ಬೀಜ 165 ಪ್ಯಾಕೇಟ್ 99 ಸಾವಿರ ಬೆಲೆಯ ನಕಲಿ ಬಿತ್ತನೆ ಬೀಜ, ಪ್ಯಾಕೇಟ್ ಸೀಲ್ ಮಾಡುವ ಯಂತ್ರ, ಸೇರಿ ವಿವಿಧ ಸಲಕರಣೆಗಳನ್ನು ಜಪ್ತಿ ಮಾಡಿದ್ದಾರೆ. ಈ ಕುರಿತು ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement