ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನಗರಸಭೆ ನಿರ್ಲಕ್ಷ್ಯ: ಮುಖ್ಯರಸ್ತೆ ಕಂಬಗಳಿಗೆ ಲೈಟ್ ಅಳವಡಿಸಿ

Lingaraj Badiger
Updated On : 10 Jun 2013, 11:31 am

ಸಿಂಧನೂರು: ನಗರದ ಮುಖ್ಯ ರಸ್ತೆಯ ವಿದ್ಯುತ್ ಕಂಬಗಳಿದ್ದರೂ ಅವುಗಳಿಗೆ ಬೆಳಕಿನ ಭಾಗ್ಯ ದೊರೆತಿಲ್ಲ.  ಕಳೆದ ಮೂರ್ನಾಲ್ಕು ತಿಂಗಳಿಂದ ನಗರಸಭೆಯವರು ಮುಖ್ಯ ರಸ್ತೆಯ ವಿದ್ಯುತ್ ಕಂಬಗಳನ್ನು ಗಮನಿಸಿಲ್ಲವೆಂದು ಮುಖ್ಯರಸ್ತೆ ವ್ಯಾಪಾರಿಗಳು ದೂರಿದ್ದಾರೆ. ವಿದ್ಯುತ್ ಕಂಬಗಳಿಗೆ ಬಲ್ಬ್‌ಗಳನ್ನು ಹಾಕದೆ ಇರುವುದರಿಂದ ವಾಹನ ಸವಾರರಿಗೆ, ಪಾದಾಚಾರಿಗಳಿಗೆ ತೀವ್ರ ತೊಂದರೆಯಾಗಿದೆ.
ನಗರಸಭೆ ಸದಸ್ಯರು ಕಳೆದ ಎರಡು ತಿಂಗಳ ಹಿಂದೆ ಆಯ್ಕೆಯಾದರೂ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ಸರ್ಕಾರ ಘೋಷಣೆ ಮಾಡದಿರವುದರಿಂದ ನಗರಸಭೆಯಲ್ಲಿ ಅಧಿಕಾರಿಗಳದ್ದೇ ಕಾರುಬಾರಾಗಿದೆ. ರಾತ್ರಿ ವೇಳೆ ಸಂಚರಿಸುವುದು ಯಾತನಾದಾಯಕ. ಬೆಳಗಿನ ಜಾವ ವಾಯುವಿಹಾರಕ್ಕೆ ಹೋಗುವವರಿಗೂ ತೀವ್ರ ತೊಂದರೆಯಾಗುತ್ತದೆ. ಇದರಿಂದ ಕೆಲವೊಮ್ಮೆ ಅಪಘಾತಗಳಾಗುವ ಸಂಭವವೂ ಇದೆ.
ಸೇತುವೆಗೂ ಬೆಳಕಿಗಿಲ್ಲ: ನಗರದ ಹಿರೇಹಳ್ಳದ ಸೇತುವೆಗೆ ಅಳವಡಿಸಲಾಗಿರುವ ವಿದ್ಯುತ್ ಕಂಬಗಳಿಗೂ ಇದೇ ಸ್ಥಿತಿ. ಸೇತುವೆ ಬಹುತೇಕ ಕಂಬಗಳಿಗೆ ಲೈಟ್‌ಗಳೇ ಇಲ್ಲದ ದುರಸ್ತಿ ಸ್ಥಿತಿಗೆ ತಲುಪಿವೆ. ರಾತ್ರಿ ವೇಳೆ ಭಾರೀ ವಾಹನಗಳು ಅತಿವೇಗದಲ್ಲಿ ಓಡಾಡುವುದರಿಂದ ಅಪಾಯದ ಭೀತಿಯಲ್ಲಿ ಚಾಲಕರು ಗಾಡಿ ನಡೆಸಬೇಕಾಗಿದೆ. ಸ್ವಲ್ಪ ಯಾಮಾರಿ ನಿರ್ಲಕ್ಷ್ಯ ವಹಿಸಿದರೆ ಸಾಕು, ವಾಹನ ಸೀದಾ ಹಳ್ಳಕ್ಕೆ ಬಿದ್ದು ಪ್ರಾಣಹಾನಿ ಆಗುವ ಸಂದರ್ಭಗಳಿವೆ. ಕೂಡಲೇ ನಗರಸಭೆ ಪೌರಾಯುಕ್ತ ನಾಸೀರ್ ಅಲಿ ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕೆಂದು ವ್ಯಾಪಾರಿಗಳು ಒತ್ತಾಯಿಸಿದ್ದಾರೆ.

ಹದಗೆಟ್ಟ ರಸ್ತೆ;
ಸಂಚಾರ ದುಸ್ತರ
ಸಿಂಧನೂರು: ತಾಲೂಕಿನ ದುರ್ಗಾ ಕ್ಯಾಂಪಿಗೆ ತೆರಳುವ ರಸ್ತೆ ಹದಗೆಟ್ಟು ಹೋಗಿದ್ದು, ಸಂಚಾರಕ್ಕೆ ತೊಂದರೆಯಾಗಿದೆ. ಕೆಲ ವರ್ಷಗಳ ಹಿಂದೆ ರಸ್ತೆ ನಿರ್ಮಾಣ ಮಾಡಿದ್ದರೂ ಪ್ರಯೋಜನವಾಗಿಲ್ಲ. ರಸ್ತೆ ತುಂಬೆಲ್ಲ ಜಲ್ಲಿ ಕಲ್ಲುಗಳು ಎದ್ದಿದ್ದು ಸಂಚಾರಕ್ಕೆ ತೀವ್ರ ತೊಂದರೆ ಎದುರಿಸುವಂತಾಗಿದೆ. ಗುಡದೂರು ಗ್ರಾಮದಿಂದ 5 ಕಿಮೀ ಅಂತರದಲ್ಲಿದ್ದು ರಸ್ತೆ ದುಸ್ಥಿತಿಯಿಂದ ಸರ್ಕಾರಿ ಬಸ್ ಸಂಚಾರ ದುಸ್ತರವಾಗಿದೆ. ಹೀಗಾಗಿ ಖಾಸಗಿ ವಾಹನಗಳನ್ನೇ ದುರ್ಗಾ ಕ್ಯಾಂಪ್ ಗ್ರಾಮಸ್ಥರು ಅವಲಂಬಿಸಿದ್ದಾರೆ. ರಸ್ತೆಯಲ್ಲಿ ಅಲ್ಲಲ್ಲಿ ಬೋಂಗಾ ಬಿದ್ದಿದ್ದು ಸಂಬಂಧಿಸಿದವರು ರಸ್ತೆ ಸುಧಾರಣೆ ಮಾಡಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಮಸ್ಥರಾದ ಹನುಮೇಶ, ಈರಪ್ಪ, ವೀರೇಶ ಮತ್ತಿತರರು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement