ಸಮಿತಿಗೆ ಮೋದಿ: ವಿಜಯೋತ್ಸವ
ಸಿಂಧನೂರು: ಸಿಂಧನೂರಿನಲ್ಲಿ ಬಿಜೆಪಿ ಮುಖಂಡರು ಭಾನುವಾರ ಮಹಾತ್ಮ ಗಾಂಧಿ ವೃತ್ತದಲ್ಲಿ ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನರೇಂದ್ರ ಮೋದಿ ಆಯ್ಕೆಯಾದದ್ದಕ್ಕೆ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಬಿಜೆಪಿ ತಾಲೂಕಾಧ್ಯಕ್ಷ ಮಧ್ವರಾಜಾಚಾರ್ಯ ನೇತೃತ್ವದಲ್ಲಿ ವಿಜಯೋತ್ಸವ ನಡೆಯಿತು. ಬಿಜೆಪಿ ಮುಖಂಡರಾದ ಸುಬ್ಬಾರಾವ್, ಮಹಾದೇವನಾಯಕ, ಮುರಳಿ ಗೊರೇಬಾಳಕ್ಯಾಂಪ್, ಅನಿಲ, ರಾಘು, ಮಂಜು, ನಾಗೇಶ ಮತ್ತಿತರರು ಇದ್ದರು.
ಹೊಟ್ಟೆನೋವು; ಮಹಿಳೆ ಆತ್ಮಹತ್ಯೆ
ರಾಯಚೂರು: ಸಿಂಧನೂರು ನಗರದ ಇಂದಿರಾ ನಗರ ಕಾಲನಿಯ ಮಹಿಳೆಯೊಬ್ಬಳು ಹೊಟ್ಟೆನೋವಿನಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತಳನ್ನು ಅಕ್ಷತಾ(42) ಎಂದು ಗುರುತಿಸಲಾಗಿದೆ.
ಈಕೆ ಕಳೆದ ಮೂರು ವರ್ಷಗಳಿಂದ ಹೊಟ್ಟೆನೋವಿನ ಬಾಧೆಯಿಂದ ಬಳಲುತ್ತಿದ್ದು, ನೋವು ತಾಳದೆ ಜೀವನದಲ್ಲಿ ಬೇಸತ್ತು ಮನೆಯಿಂದ ಹೊರಗೆ ಹೋಗಿ ಸಿಂಧನೂರು ನಗರದ ಬಪ್ಪೂರು ರಸ್ತೆಯಲ್ಲಿರುವ ಈದ್ಗಾ ಕಟ್ಟೆಯ ಹತ್ತಿರ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಸಿಂಧನೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.