ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ತುಕ್ಕು ಹಿಡಿದಿರುವ ಯಂತ್ರ, ವಾರದಿಂದ ನೀರಿಗೆ ಪರದಾಟ

Lingaraj Badiger
Updated On : 11 Jun 2013, 11:22 am

ಶಹಾಪುರ: ತಾಲೂಕಿನ ಕೊಳ್ಳೂರು ಎಂ.ಗ್ರಾಮದಲ್ಲಿ ನೀರೆತ್ತುವ ಮೋಟಾರುಗಳು ಸಂಪೂರ್ಣ ತುಕ್ಕು ಹಿಡಿದು ಹೋಗಿದ್ದು ಇಡೀ ಗ್ರಾಮದಲ್ಲಿ ನೀರಿಗಾಗಿ ಪರದಾಡುವಂತಾಗಿದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೂಕ್ತ ಕಾಳಜಿ ವಹಿಸದಿರುವುದು ಇಂಥ ಸಮಸ್ಯೆಗೆ ಕಾರಣವಾಗಿದೆ ಎಂದು ಹೈಕ ಹೋರಾಟ ಸಮಿತಿಯ ಶಿವುರಡ್ಡಿ ಕೊಳ್ಳೂರು ಆರೋಪಿಸಿದ್ದಾರೆ.
ಈ ಕುರಿತು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿಯೊಂದನ್ನು ಸಲ್ಲಿಸಿ, ಹೊಸ ಪಂಪ್‌ಸೆಟ್ ಜೋಡಿಸಿ ನೀರಿನ ಬವಣೆ ನೀಗಿಸುವಂತೆ ಆಗ್ರಹಿಸಿದ್ದಾರೆ. ಇಡೀ ಗ್ರಾಮಕ್ಕೆ ನೀರು ಸರಬರಾಜು ಮಾಡುವ ಒಂದು ಬಾವಿ ಇದ್ದು, ಅದರಿಂದಲೂ ಈಗ ನೀರು ಬರುತ್ತಿಲ್ಲ. ಸರ್ಕಾರ ಕುಡಿಯುವ ನೀರಿಗಾಗಿ ಯಾವುದೇ ತೊಂದರೆ ಬಾರದಂತೆ ಅನುದಾನ ನೀಡುತ್ತಿದ್ದರೂ ಪಂಚಾಯಿತಿ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ಪಂಪ್ ಆಪರೇಟರ್‌ಗಳನ್ನು ವಿಚಾರಿಸಿದರೆ, ಪಂಪ್‌ಸೆಟ್, ಪೈಪ್‌ಲೈನ್ ಎಲ್ಲವೂ ತುಕ್ಕು ಹಿಡಿದು ಹೋಗಿವೆ. ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂಬ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ತಾಪಂ ಇಒ ಈ ಕುರಿತು ಗಮನ ಹರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement