ಸಾಹಿತ್ಯ ಸಮ್ಮೇಳನ; ಕಲಾಕೃತಿಗಳ ಆಹ್ವಾನ
ರಾಯಚೂರು: ನಗರದಲ್ಲಿ ಜೂ.15ರಂದು ನಡೆಯಲಿರುವ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭ ಪುಸ್ತಕ ಹಾಗೂ ಚಿತ್ರಕಲಾ ಪ್ರದರ್ಶನಕ್ಕೆ ಆಸಕ್ತರಿಂದ ಅರ್ಜಿ ಕರೆಯಲಾಗಿದೆ. ತಾಲೂಕಿನ ಚಿತ್ರ ಕಲಾವಿದರು ತಾವು ರಚಿಸಿದ ತಲಾ ಎರಡು ಕಲಾಕೃತಿಗಳ ಪ್ರದರ್ಶನ ಮಾಡಬಹುದು. ಕಲಾಕೃತಿಗಳನ್ನು ಪ್ರದರ್ಶಿಸುವ ಕಲಾವಿದರಿಗೆ ವರ್ಣಮಯ ಪ್ರಶಸ್ತಿ ಪತ್ರ ನೀಡಲಾಗುತ್ತದೆ. ಜೂ.13ರೊಳಗೆ ಕಲಾಕೃತಿಗಳನ್ನು ಪಿ.ಚಂದ್ರಶೇಖರ್, ಪ್ರಾಚಾರ್ಯರು, ಶ್ರೀಗುರು ಕಲಾಮಂದಿರ, ಕರ್ನಾಟಕ ಸಂಘ, ರಾಯಚೂರು ಇಲ್ಲಿಗೆ ಸಲ್ಲಿಸಲು ಕೋರಲಾಗಿದೆ. ಅದೇ ರೀತಿ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಮಳಿಗೆಗಳ ವ್ಯವಸ್ಥೆ ಮಾಡಿದ್ದು, ಆಸಕ್ತರು ಪ್ರದರ್ಶನ ಸಮಿತಿ ಸದಸ್ಯ ಸೈಯದ್ ಹಫೀಜುಲ್ಲಾ ಮೊ. 9448913905 ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ.
ನಾಳೆ ನೇರ ಫೋನ್-
ಇನ್ ಕಾರ್ಯಕ್ರಮ
ರಾಯಚೂರು: ಮುಂಗಾರು ಹಂಗಾಮಿನ ಸಿದ್ಧತೆ ಮತ್ತು ಕೃಷಿ ಇಲಾಖೆಯ ಯೋಜನೆಗಳ ಕುರಿತು ರಾಯಚೂರು ಆಕಾಶವಾಣಿ ಕೇಂದ್ರದಲ್ಲಿ ಜೂ. 12ರಂದು ನೇರ ಫೋನ್ ಇನ್ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಸಂಜೆ 6.50 ರಿಂದ 7.35ರವರೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದ್ದು, ಕಾರ್ಯಕ್ರಮದಲ್ಲಿ ಕೃಷಿ ವಿವಿ ಮುಖ್ಯ ಸಂಶೋಧನಾ ಕೇಂದ್ರದ ಸಹಸಂಶೋಧನಾ ನಿರ್ದೇಶಕ ಡಾ. ಶಂಕರೇಗೌಡ ಮತ್ತು ಜಂಟಿ ಕೃಷಿ ನಿರ್ದೇಶಕ ಡಾ.ಶ್ರೀನಿವಾಸ್ ಪಾಲ್ಗೊಂಡು ರೈತರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಮುಂಗಾರು ಹಂಗಾಮಿನ ಸಿದ್ಧತೆ ಮತ್ತು ಕೃಷಿ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಆಕಾಶವಾಣಿ ದೂ. 08532- 223318, 223365 ಇಲ್ಲಿಗೆ ಕರೆ ಮಾಡುವ ಮೂಲಕ ತಜ್ಞರೊಂದಿಗೆ ಮಾತನಾಡಿ ಮಾಹಿತಿ ಪಡೆಯಬಹುದಾಗಿದೆ ಎಂದು ರಾಯಚೂರು ಆಕಾಶವಾಣಿ ಕೇಂದ್ರದ ಪ್ರಕಟಣೆ ತಿಳಿಸಿದೆ.