ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

5.50 ಲಕ್ಷ ಮೌಲ್ಯದ ನಕಲಿ ಹತ್ತಿ ಬಿತ್ತನೆ ಬೀಜ ಜಪ್ತಿ

Mainashree
Updated On : 11 Jun 2013, 8:57 am

ರಾಯಚೂರು: ಆಂಧ್ರದ ಕರ್ನೂಲ್‌ನಿಂದ ಜಿಲ್ಲೆಗೆ ವಾಹನವೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 5.50 ಲಕ್ಷ ಬೆಲೆಯ ನಕಲಿ ಹತ್ತಿ ಬಿತ್ತನೆ ಬೀಜಗಳನ್ನು ಪೊಲೀಸರು ಸೋಮವಾರ ತಡರಾತ್ರಿ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.  ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿದೆ. ಬಂಧಿತರನ್ನು ಆಂಧ್ರ ಮೂಲದ ಶಿವಯ್ಯ, ರಾಜೇಶ್, ರಮೇಶ್ ಮತ್ತು ವಿಜಯ ಎಂದು ಗುರುತಿಸಲಾಗಿದೆ. ಇವರು ಬೊಲೆರೋ ವಾಹನದಲ್ಲಿ ನವೋದಯ ಮೆಡಿಕಲ್ ಕಾಲೇಜಿನ ಬಳಿ ತೆರಳುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು ವಾಹನದಲ್ಲಿದ್ದ 450 ಗ್ರಾಂ ತೂಕದ 1010 ನಕಲಿ ಬಿತ್ತನೆ ಬೀಜಗಳಿದ್ದ ಪ್ಯಾಕ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ನೇತಾಜಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement