ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕುಮುದಾ ನಾಯಕ ನಿಧನಕ್ಕೆ ಸಂತಾಪ

Lingaraj Badiger
Updated On : 12 Jun 2013, 11:09 am

ಸಿಂಧನೂರು: ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ ಅವರ ಸಹೋದರಿ ಚಿತ್ರದುರ್ಗದ ನೆಹರು ಯುವಕ ಕೇಂದ್ರದ ಅಧಿಕಾರಿ ಕವಯಿತ್ರಿ ಬಿ.ಟಿ. ಕುಮುದಾ ನಾಯಕರು ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಕ್ಕೆ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬೀರಪ್ಪ ಶಂಭೋಜಿ ಸಂತಾಪ ಸೂಚಿಸಿದ್ದಾರೆ.
ಕುಮುದಾ ನಾಯಕರ ನಿಧನದಿಂದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು. ಜಿಲ್ಲಾ ಕಸಾಪ ಗೌರವಾಧ್ಯಕ್ಷ ಎಸ್.ಶರಣೇಗೌಡ, ಗೌರವ ಕಾರ್ಯದರ್ಶಿ ಎಸ್.ದೇವೇಂದ್ರಗೌಡ, ತಾಲೂಕು ಕಸಾಪ ಅಧ್ಯಕ್ಷೆ ರಮಾದೇವಿ ಶಂಭೋಜಿ, ಗೌರವ ಕಾರ್ಯದರ್ಶಿಗಳಾದ ಶ್ರೀಶೈಲ್ ಕೌದಿ, ವೀರೇಶ ಗೋನವಾರ್, ಗೌರವ ಕೋಶಾಧ್ಯಕ್ಷ ಆರ್.ಸಿ. ಪಾಟೀಲ್, ಎಚ್. ಬಸವರಾಜ್, ಪಂಪಯ್ಯ ಸಾಲಿಮಠ, ಅಮರೇಶ ಅಲಬನೂರು, ಬಾಬರಬೇಗ್, ಶಿವಪುತ್ರಪ್ಪ, ನಾಗರತ್ನ ಬಂಗಾರಶೆಟ್ಟಿ, ಶಿವಲೀಲಾ ಹಿರೇಮಠ, ಸಾಹಿತಿ ವೆಂಕನಗೌಡ ವಟಗಲ್, ಕವಿ ಅಯ್ಯಪ್ಪ ಮೇಟಿ, ವಿ.ಸಿ. ಪಾಟೀಲ್, ಭಾರತಿದೇವಿ, ರಾಘವೇಂದ್ರ ಕುಲಕರ್ಣಿ ಕಂಬನಿ ಮಿಡಿದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement