ಜಾಲವಾಡಗಿ ಪಿಡಿಒ ನಿರ್ಲಕ್ಷ್ಯಕ್ಕೆ ಆಕ್ರೋಶ
ಸಿಂಧನೂರು: ತಾಲೂಕಿನ ಜಾಲವಾಡಗಿ ಗ್ರಾಮದಲ್ಲಿ ಕಳೆದ 15 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದ್ದು, ರಾಮತ್ನಾಳ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮುದುಕಪ್ಪ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಜಾಲವಾಡಗಿ ಮಹ್ಮದ್ ರಫೀ, ಮೌನೇಶ, ಶಿವಣ್ಣ, ಲಕ್ಷ್ಮಣ, ಸಣ್ಣನಾಗಪ್ಪ, ಸಿದ್ದನಗೌಡ, ನಾಗರಾಜ ದೂರಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಇತ್ತೀಚಿಗೆ ಸುರಿದ ಭಾರಿ ಮಳೆಯಿಂದಾಗಿ ಪೈಪ್ಲೈನ್ಗಳು ಕಿತ್ತುಹೋಗಿವೆ. ಸಾರ್ವಜನಿಕರು ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇರುವ ಒಂದು ಬೋರ್ವೆಲ್ ದುರಸ್ತೀಗಾಡಿಗಿದೆ. ಸುಮಾರು 1 ಕಿಮೀ ದೂರದಲ್ಲಿರುವ ಹಳ್ಳದಿಂದ ಗ್ರಾಮದ ಜನತೆ ಬಳಸುವ ನೀರನ್ನು ತರಬೇಕಾಗಿದೆ. ಕುಡಿಯುವ ನೀರಿಗಾಗಿ ಬುದ್ದಿನ್ನಿ, ಸಾಗರಕ್ಯಾಂಪ್, ದಿದ್ದಗಿ ಗ್ರಾಮಗಳಿಂದ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದರೆ ಗ್ರಾಪಂ ಕಾರ್ಯಾಲಯದ ಮುಂದೆ ಖಾಲಿ ಕೊಡಗಳನ್ನಿಟ್ಟು ಹೋರಾಟ ಮಾಡುವುದು, ಪಂಚಾಯಿತಿಗೆ ಬೀಗ ಜಡಿಯುವುದು ಅನಿವಾರ್ಯವಾಗುತ್ತದೆ ಎಂದು ತಿಳಿಸಿದ್ದಾರೆ.