ದೇವದುರ್ಗ; ಜೂ.16ರಂದು ಸಮ್ಮೇಳನ
ದೇವದುರ್ಗ: ಅಕ್ಷರ ದಾಸೋಹ ನೌಕರರ ಸಂಘದ 3ನೇ ತಾಲೂಕು ಸಮ್ಮೇಳನ ಜೂ.16ರಂದು ಆಯೋಜಿಸಲಾಗಿದೆ.
ಈ ಕುರಿತು ಪ್ರಕಟಣೆ ನೀಡಿರುವ ಸಂಘದ ಗೌರವಾಧ್ಯಕ್ಷ ಗಿರಿಯಪ್ಪ ಪೂಜಾರ್, ಸಿಐಟಿಯು ತಾಲೂಕು ಅಧ್ಯಕ್ಷೆ ಮರಿಯಮ್ಮ, ಅಂದು ಪಟ್ಟಣದ ಎಪಿಎಂಸಿ ಆವರಣದಲ್ಲಿ ಸಮ್ಮೇಳನ ಆಯೋಜಿಸಿದ್ದು, ಸಮ್ಮೇಳನಕ್ಕೆ ಸಿಐಟಿಯು ರಾಜ್ಯ ಕಾರ್ಯದರ್ಶಿ ಮಾಲಿನಿ ಮೇಸ್ತಾ, ಮುಖಂಡರಾದ ಶೇಕ್ಷಾಖಾದ್ರಿ, ಎಚ್. ಪದ್ಮಾ, ನರಸಣ್ಣ ನಾಯಕ ಸೇರಿ ಜಿಲ್ಲಾ, ತಾಲೂಕು ಮಟ್ಟದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಈ ಸಮ್ಮೇಳನದಲ್ಲಿ ಅಕ್ಷರ ದಾಸೋಹ ನೌಕರರಿಗೆ ಸೇವಾ ಭದ್ರತೆ ಕನಿಷ್ಠ ವೇತನ, ಮತ್ತು ನೌಕರರ ಮೇಲೆ ನಡೆಯುವ ದಬ್ಬಾಳಿಕೆ ತಡೆಯಲು ನಿರ್ಣಯ ಕೈಗೊಳ್ಳಲಾಗುತ್ತಿದ್ದು, ಸಮ್ಮೇಳನದಲ್ಲಿ ಅಕ್ಷರ ದಾಸೋಹ ಸರ್ವ ನೌಕರರು ಭಾಗವಹಿಸುವಂತೆ ಮನವಿ ಮಾಡಿದ್ದಾರೆ.