ಪದಾಧಿಕಾರಿಗಳ ಆಯ್ಕೆ
ರಾಯಚೂರು: ನಗರದ ಗಾಜಗಾರಪೇಟೆಯ ಶ್ರೀ ಆದಿಶಂಕರ ಸೇವಾ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಈ ಕುರಿತು ಪ್ರಕಟಣೆ ನೀಡಿರುವ ಸಮಿತಿಯ ಕಾರ್ಯದರ್ಶಿ ಚಂದ್ರಕಾಂತ ವೈದ್ಯ ಅವರು, ಅಧ್ಯಕ್ಷರಾಗಿ ಪಿ.ಸಿ. ಸುಬ್ರಹ್ಮಣ್ಯಂ, ಉಪಾಧ್ಯಕ್ಷರಾಗಿ ವಿಠ್ಠಲ್ ಪದಕಿ, ಕಾರ್ಯದರ್ಶಿಯಾಗಿ ಚಂದ್ರಕಾಂತ ವೈದ್ಯ, ಜಂಟಿ ಕಾರ್ಯದರ್ಶಿಯಾಗಿ ವಿ.ಹನುಮಂತರಾವ್, ಕೋಶಾಧ್ಯಕ್ಷರಾಗಿ ಚಂದ್ರಮೌಳಿ, ಕಾರ್ಯಕಾರಿ ಸದಸ್ಯರಾಗಿ ವಿಶ್ವನಾಥ್,ಚೇತನಾ ನಂದೀಶ್ ಆಯ್ಕೆಯಾಗಿದ್ದಾರೆಂದು ತಿಳಿಸಿದ್ದಾರೆ. ಈ ಕುರಿತು ನಡೆದ ಸಭೆಯಲ್ಲಿ ಹಿರಿಯ ಸದಸ್ಯರಾದ ಡಾ. ಎ.ಶಂಕರ್, ಟಿ.ಜಿ. ರಾಘವೇಂದ್ರರಾವ್, ನಾರಾಯಣ ಶಾಸ್ತ್ರಿ, ವಲ್ಲಭರಾವ್, ಕೃಷ್ಣಮೂರ್ತಿ ಸೇರಿದಂತೆ ಅನೇಕರಿದ್ದರು ಎಂದು ತಿಳಿಸಿದ್ದಾರೆ.
ಶಿಕ್ಷಕರ ಸಂಘಕ್ಕೆ ಆಯ್ಕೆ
ರಾಯಚೂರು: ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಜಿಲ್ಲೆಯ ಸರ್ವ ಸದಸ್ಯರ ಸಭೆ ಈಚೆಗೆ ಲಿಂಗಸ್ಗೂರು ಪಟ್ಟಣದಲ್ಲಿ ನಡೆದು, ನೂತನ ಜಿಲ್ಲಾ ಪದಾಧಿಕಾರಿಗಳನ್ನು ಈಚೆಗೆ ಆಯ್ಕೆ ಮಾಡಲಾಗಿದೆ. ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಡಿ. ಹನುಮಂತ, ಉಪಾಧ್ಯಕ್ಷರಾಗಿ ಪ್ರಭುಲಿಂಗ, ಪ್ರಧಾನ ಕಾರ್ಯದರ್ಶಿಯಾಗಿ ಮಹೇಶ್, ಖಜಾಂಚಿಯಾಗಿ ವೀರಭದ್ರಪ್ಪ, ಜಂಟಿ ಕಾರ್ಯದರ್ಶಿಯಾಗಿ ಕೆ. ಮಲ್ಲಿಕಾರ್ಜುನ, ಅಂಬಣ್ಣ, ಮಹಿಳಾ ಪ್ರತಿನಿಧಿಯಾಗಿ ಶೋಭಾ ಅವರು ನೇಮಕಗೊಂಡಿದ್ದಾರೆಂದು ಸಂಘದ ಪ್ರಕಟಣೆ ತಿಳಿಸಿದೆ.
14ರಂದು ಜಿಪಂ ಸಭೆ
ರಾಯಚೂರು: ಇಲ್ಲಿನ ಜಿಲ್ಲಾ ಪಂಚಾಯಿತಿಯ ಕರ್ನಾಟಕ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆಯು ಜೂ.14ರಂದು ನಡೆಯಲಿದೆ ಎಂದು ಜಿಪಂ ಪ್ರಕಟಣೆ ತಿಳಿಸಿದೆ. ಈ ಕುರಿತು ಜಿಪಂ ಸಿಇಒ ಜ್ಞಾನಪ್ರಕಾಶ್ ಪ್ರಕಟಣೆ ನೀಡಿದ್ದು, ಈ ಮೊದಲು ಈ ಸಭೆಯನ್ನು ಜೂ. 11ರಂದು ನಡೆಸಲು ನಿರ್ಧರಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಸದ್ಯ ಈ ಸಭೆಯು ಜೂ. 14ರಂದು ನಡೆಯಲಿದೆ ಎಂದು ತಿಳಿಸಿದ್ದಾರೆ.