ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

16ರಂದು ಸಹಶಿಕ್ಷಕರ ಸಂಘದ ಸಭೆ

Lingaraj Badiger
Updated On : 13 Jun 2013, 10:49 am

ರಾಯಚೂರು: ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕಾರ್ಯಕಾರಿ ಸಭೆಯನ್ನು ಜೂ.16ರಂದು ಕರೆಯಲಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ. ಅಂದು ಬೆಳಗ್ಗೆ 11 ಗಂಟೆಗೆ ನಗರದ ಜಹೀರಾಬಾದ್ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯಲಿರುವ ಸಭೆಯಲ್ಲಿ ಇತ್ತೀಚೆಗೆ ನಿವೃತ್ತರಾದ ಬಾಬು ಭಂಡಾರಿಗಲ್ ಅವರಿಗೆ ಸನ್ಮಾನ ಮತ್ತು ಸಂಘದ ನೂತನ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತಿದ್ದು, ಖಾಲಿ ಹುದ್ದೆಗಳ ಭರ್ತಿ, ವೇತನ ತಾರತಮ್ಯ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಗುತ್ತದೆ. ಕಾರಣ ಸಂಘದ ಎಲ್ಲ ಪ್ರಮುಖ ಸದಸ್ಯರು ತಪ್ಪದೇ ಭಾಗವಹಿಸುವಂತೆ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ್ ದಿನ್ನಿ ಮನವಿ ಮಾಡಿದ್ದಾರೆ.
16ರಂದು ಸಭೆ
ರಾಯಚೂರು: ಜಿಲ್ಲೆಯ ಗಂಗಾಮತಸ್ಥ ನೌಕರರ ಸಂಘದ ಸಭೆಯನ್ನು ಜೂ.16ರಂದು ಕರೆಯಲಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ. ಅಂದು ಬೆಳಗ್ಗೆ 10ಕ್ಕೆ ನಗರದ ರಾಜೇಂದ್ರ ಗಂಜ್‌ನ ಎಪಿಎಂಸಿ ಕಚೇರಿಯ ಸಭಾಂಗಣದಲ್ಲಿ ನಡೆಯಲಿರುವ ಸಭೆಯಲ್ಲಿ ಗಂಗಾಮತಸ್ಥ ನೌಕರರ ಆಗುತ್ತಿರುವ ಅನ್ಯಾಯ, ಸಮಾಜದ ಸಂಘಟನೆ ಸೇರಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಗುತ್ತದೆ. ಕಾರಣ ಸಭೆಯಲ್ಲಿ ಸಮಾಜದ ನೌಕರರು ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಸಂಘದ ರಂಗನಾಥ ದೇಸಾಯಿ ಮತ್ತಿತರರು ಮನವಿ ಮಾಡಿದ್ದಾರೆ.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement