16 ರಿಂದ ಗ್ರಾಮೀಣ ನಾಟಕೋತ್ಸವ
ರಾಯಚೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಶಕ್ತಿನಗರದ ಅಂಬೇಡ್ಕರ್ ಸಭಾಭವನದಲ್ಲಿ ಜೂ.16 ರಿಂದ ಗ್ರಾಮೀಣ ನಾಟಕೋತ್ಸವ ಆಯೋಜಿಸಲಾಗಿದೆ.
ಅಂದು ಸಂಜೆ 6ಕ್ಕೆ ನಾಟಕೋತ್ಸವವನ್ನು ಗ್ರಾಮೀಣ ಕ್ಷೇತ್ರದ ಶಾಸಕ ತಿಪ್ಪರಾಜು ಹವಾಲ್ದಾರ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ಅಂಬುಜಾ ನಾಯಕ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಪಂ ಸದಸ್ಯ ಅಚ್ಯುತ ರೆಡ್ಡಿ, ತಾಪಂ ಸದಸ್ಯರಾದ ಶಶಿಧರಗೌಡ, ಮಂಜುಳಾ ಪ್ಯಾಟಿ, ಸುಧಾ ಸೂಗೂರಪ್ಪ, ಸಹಾಯಕ ಆಯುಕ್ತೆ ಮಂಜುಶ್ರೀ, ಆರ್ಟಿಪಿಎಸ್ ಎಂಡಿ ವೇಣುಗೋಪಾಲ್ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ಅಂಧೇರಿ ನಗರ ಚೌಪಟ್ ರಾಜಾ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.
ಅದೇ ರೀತಿ ಜೂ.17 ರಂದು ಸಂಜೆ 6ಕ್ಕೆ ಕೈಲಾಗದ ಗಂಡ ಕೈಲಾಸ ಕಂಡ, ಗೋಕರ್ಣದ ಗೌಡಶಾನಿ ಎಂಬ ಎರಡು ನಾಟಕಗಳ ಪ್ರದರ್ಶನ ಆಯೋಜಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಿಳಿಸಿದೆ.