ಇನ್ನೂ ಚುನಾವಣಾ ವೆಚ್ಚ ವಿವರ ನೀಡದ ಪೂಜಾ ಗಾಂಧಿ
ಕನ್ನಡಪ್ರಭ ವಾರ್ತೆ ರಾಯಚೂರು ಜೂ.13
ರಾಯಚೂರು ನಗರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಸೋತಿರುವ ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿ, ನಟಿ ಪೂಜಾ ಗಾಂಧಿ ಇನ್ನೂ ತಮ್ಮ ಚುನಾವಣಾ ಖರ್ಚಿ ಲೆಕ್ಕವನ್ನು ಆಯೋಗಕ್ಕಿ ಕೊಟ್ಟಿಲ್ಲ. ಅಭ್ಯರ್ಥಿಗಳು ಚುನಾವಣಾ ವೆಚ್ಚದ ವಿವರವನ್ನು ಆಯೋಗಕ್ಕೆ ಸಲ್ಲಿಸಲು ಜೂ.7 ಕೊನೆಯ ದಿನವಾಗಿತ್ತು.
ಪೂಜಾ ಗಾಂಧಿ ಮಾತ್ರವಲ್ಲದೆ, ರಾಯಚೂರು ಜಿಲ್ಲೆಯ ಇನ್ನೂ 15 ಅಭ್ಯರ್ಥಿಗಳು ತಮ್ಮ ವೆಚ್ಚದ ವಿವರ ಸಲ್ಲಿಸಬೇಕಿದೆ. ಒಟ್ಟು 71 ಅಭ್ಯರ್ಥಿಗಳು ಆಯೋಗಕ್ಕೆ ವೆಚ್ಚದ ವಿವರ ಸಲ್ಲಿಸಿದ್ದಾರೆ. ಜಿಲ್ಲೆಯ 7 ಕ್ಷೇತ್ರಗಳಲ್ಲಿ ಒಟ್ಟು 86 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದರು ಎಂದು ಜಿಲ್ಲಾಡಳಿತ ಚುನಾವಣಾ ವಿಭಾಗ ತಿಳಿಸಿದೆ. ವಿಶೇಷ ಎಂದರೆ, ವೆಚ್ಚದ ವಿವರ ಸಲ್ಲಿಸಿರುವ 71 ಅಭ್ಯರ್ಥಿಗಳಲ್ಲಿ ಯಾರೋಬ್ಬರು 16 ಲಕ್ಷ ಮೀರಿಲ್ಲ!