ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕುಡಿವ ನೀರಿಗೆ ವಿದ್ಯಾರ್ಥಿಗಳ ಪರದಾಟ

Lingaraj Badiger
Updated On : 14 Jun 2013, 10:53 am

ಲಿಂಗಸ್ಗೂರು: ತಾಲೂಕಿನ ಗುರುಗುಂಟಾ ಗ್ರಾಮದಿಂದ ಐದಬಾವಿ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿನ ಕೆನಾಲ್ ಹಣಿ ದೊಡ್ಡಿ ಕ್ರಾಸ್‌ನಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆಟದಿಂದ ದೊಡ್ಡಿಗಳ ಜನತೆ ,ಶಾಲಾ ಮಕ್ಕಳು ಕುಡಿವ ನೀರಿನ ತೊಂದರೆಯಿಂದ ಪರದಾಡುವಂತಾಗಿದೆ.
ಗುರುಗುಂಟಾ ಗ್ರಾಮದಿಂದ ಸುಮಾರು 6- 8 ಕಿಮೀ ದೂರದ ಕೆನಾಲ್ ಕ್ರಾಸ್‌ನಲ್ಲಿ ಬೋರ್‌ವೆಲ್ ಕೊರೆದು ಪೈಪ್‌ಲೈನ್ ಮೂಲಕ ಪ್ರಾಥಮಿಕ ಶಾಲಾ ಮುಂಭಾಗದಲ್ಲಿ ಕುಡಿಯುವ ನೀರಿನ ತೊಟ್ಟಿಗೆ ನೀರು ಸರಬರಾಜು ಮಾಡಲಾಗುತ್ತದೆ. ಇದರಿಂದ ಹಣಿ ದೊಡ್ಡಿಯ ಜನತೆ ಹಾಗೂ ಶಾಲಾ ಮಕ್ಕಳು ಈ ನೀರನ್ನೆ ಬಳಸುತ್ತಾರೆ. ಆದರೆ ಕಳೆದ ಮೂರ್ನಾಲ್ಕು ತಿಂಗಳಿಂದ ವಿದ್ಯುತ್ ಕಣ್ಣಾ ಮುಚ್ಚಾಲೆ ಆಟದಿಂದಾಗಿ ನೀರಿನ ತೊಟ್ಟಿಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡಲಾಗುತ್ತಿಲ್ಲ.
ದೊಡ್ಡಿಯ ಜನತೆ ಸುಮಾರು ಒಂದು ಕಿಮೀ ದೂರದಲ್ಲಿನ ಕೈಪಂಪು ಮೂಲಕ ನೀರು ಹೊತ್ತು ಪರಿಸ್ಥಿತಿ ಬಂದೊದಗಿದೆ. ಶಾಲಾ ಮಕ್ಕಳು ಬಿಸಿಯೂಟ ಸೇವಿಸಿದ ನಂತರ ನೀರು ಕುಡಿಯಲು ದೂರದ ಕೈಪಂಪಿಗೆ ತೆರಳುವ ಪರಿಸ್ಥಿತಿ ಎದುರಾಗಿದೆ ಎಂದು ದೊಡ್ಡಿಗಳ ಜನ ವಿಷಾಧದಿಂದ ನುಡಿಯುತ್ತಾರೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗಮನ ಹರಿಸಿ  ಶಾಲಾ ಮಕ್ಕಳಿಗೆ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಬೇಕೆಂದು ದೊಡ್ಡಿಯ ಜನತೆ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement