ಬೀಜ, ರಸಗೊಬ್ಬರ ಮಾರಾಟ
ಗುಲ್ಬರ್ಗ: ಜಿಲ್ಲೆಯಲ್ಲಿ ಈಗಾಗಲೇ 2013- 14ನೇ ಸಾಲಿನ ಮುಂಗಾರು ಬಿತ್ತನೆ ಕಾರ್ಯ ಪ್ರಾರಂಭವಾಗಿದ್ದು, ಕೃಷಿ ಇಲಾಖೆಯಿಂದ ರೈತ ಸಂಪರ್ಕ ಕೇಂದ್ರಗಳ ಮುಖಾಂತರ ಪ್ರಮಾಣಿತ ಬೀಜ ಮತ್ತು ಸಹಕಾರ ಸಂಘಗಳ ಮೂಲಕ ರಸಗೊಬ್ಬರ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿದೆ. ಪ್ರಮಾಣಿತ ಬಿತ್ತನೆ ಬೀಜ ರಿಯಾಯಿತಿ ಮೇಲೆ ಮಾರಾಟ ಮಾಡಲಾಗುತ್ತಿದೆ. ರಸಗೊಬ್ಬರಗಳು ಕೇಂದ್ರ ಸರ್ಕಾರದಿಂದ ಪ್ರಕಟ ಮಾಡಲಾಗಿರುವ ಹೊಸ ದರಗಳ ಮೇಲೆ ಮಾರಾಟ ಮಾಡಲಾಗುತ್ತಿವೆ.
ರೈತರಿಗೆ ಬೀಜ ಖರೀದಿ ಮಾಡುವಾಗ ಪ್ರಮಾಣಿತ ಬೀಜವನ್ನೇ ಖರೀದಿ ಮಾಡಿ ರಸೀದಿ ಕಡ್ಡಾಯವಾಗಿ ಪಡೆಯಬೇಕು. ರಸಗೊಬ್ಬರಗಳು ಕೂಡ ಅಧಿಕೃತ ಮಾರಾಟಗಾರರಿಂದ ಮತ್ತು ಸಹಕಾರ ಸಂಘಗಳಿಂದ ಖರೀದಿ ಮಾಡಬೇಕು.