ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮುಂಗಾರು ಉತ್ಸವಕ್ಕೆ ಹಣ: ವಿರೋಧ

Lingaraj Badiger
Updated On : 14 Jun 2013, 10:52 am

ರಾಯಚೂರು: ನಗರದಲ್ಲಿ ಮುನ್ನೂರು ಕಾಪು ಸಮಾಜದಿಂದ ಆಯೋಜಿಸಲಾಗುವ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬಕ್ಕೆ ನಗರಸಭೆಯಿಂದ ಕಾನೂನುಬಾಹಿರವಾಗಿ ಹಣ ಪಡೆಯುವ ತಂತ್ರ ಮಾಜಿ ಶಾಸಕ ಪಾಪಾರೆಡ್ಡಿ ಅವರು ನಡೆಸಿದ್ದು, ಅಂಥ ಪ್ರಯತ್ನಕ್ಕೆ ಅವಕಾಶ ನೀಡದಂತೆ ಹೈ.ಕ. ವಿಮೋಚನಾ ವೇದಿಕೆ ಒತ್ತಾಯಿಸಿದೆ.
ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವ ಸಂಘಟನೆಯ ಜಿಲ್ಲಾ ಸಂಚಾಲಕ ಕೆ.ಪಿ. ಅನಿಲಕುಮಾರ್ ಮತ್ತಿತರರು, ಮಾಜಿ ಶಾಸಕ ಹಾಗೂ ಮುನ್ನೂರು ಕಾಪು ಸಮಾಜದ ಮುಖಂಡ ಪಾಪಾರೆಡ್ಡಿ ಅವರು ನಗರದಲ್ಲಿ ಮುಂಗಾರು ಸಾಂಸ್ಕೃತಿಕ ಹಬ್ಬ ಆಯೋಜಿಸುತ್ತಿದ್ದು, ಅದಕ್ಕೆ ನಗರಸಭೆಯಿಂದ ಪ್ರತಿ ವರ್ಷ 3 ಲಕ್ಷ ಪಡೆಯುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ಜಿಲ್ಲಾಡಳಿತಕ್ಕೆ ಹಿಂದೊಮ್ಮೆ ದೂರು ಸಲ್ಲಿಸಿದ್ದು, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಸರ್ಕಾರದ ಆದೇಶದಂತೆ ಯಾವುದೇ ಕಾರ್ಯಕ್ರಮಗಳಿಗೆ ನಗರಸಭೆಯಿಂದ 15 ಸಾವಿರ ಮಾತ್ರ ನೀಡಬಹುದಾಗಿದೆ. ಆದರೆ ಅಧಿಕಾರಿಗಳು ಮಾರ್ಗಸೂಚಿ ಉಲ್ಲಂಘಿಸಿ ಲಕ್ಷಾಂತರ ರು. ಮುನ್ನೂರು ಕಾಪು ಸಮಾಜದ ಕಾರ್ಯಕ್ರಮಕ್ಕೆ ನೀಡಿರುವುದು ಸರಿಯಲ್ಲ.
 ಅಷ್ಟೇ ಅಲ್ಲ ಮುಂಗಾರು ಹಬ್ಬದ ನೆಪದಲ್ಲಿ ಪ್ರಾಣಿಗಳಿಗೆ ಹಿಂಸೆ ನೀಡುವಂಥ ಕಾರ್ಯಕ್ರಮಕ್ಕೆ ನಗರಸಭೆಯು ಹಣ ನೀಡಲು ನಿರ್ಧರಿಸಿದ್ದು ಖಂಡನೀಯ ಎಂದು ಟೀಕಿಸಿದ್ದಾರೆ.
ಕಾರಣ ಕೂಡಲೇ ಜಿಲ್ಲಾಡಳಿತ ನಗರಸಭೆಯಿಂದ ನೀಡಲಾಗುವ ಅನುದಾನಕ್ಕೆ ತಡೆಯೊಡ್ಡಬೇಕು ಎಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement