ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಇಂದು ಸಚಿವ ಎಚ್ಕೆಪಿ ಪ್ರವಾಸ

Lingaraj Badiger
Updated On : 17 Jun 2013, 11:09 am

ರಾಯಚೂರು: ಜಿಲ್ಲೆಯ ಆರ್ಸೆನಿಕ್ ಪೀಡಿತ ಗ್ರಾಮಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಸಚಿವ ಎಚ್.ಕೆ. ಪಾಟೀಲ್ ಅವರು ಜೂ.17 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಅವರು ಗದಗದಿಂದ ಮಾನವಿ ತಾಲೂಕಿನ ಪಾಮನಕಲ್ಲೂರು ಗ್ರಾಮಕ್ಕೆ ಬೆಳಗ್ಗೆ 10ಕ್ಕೆ ಆಗಮಿಸಲಿದ್ದಾರೆ. ನಂತರ ಅವರು ಕೌತಾಳ, ಚಿಂಚರಕಿ ಮಾರ್ಗವಾಗಿ ದೇವದುರ್ಗ ತಾಲೂಕಿನ ವಂದಲಿ, ಊಟಿ ಗ್ರಾಮಗಳಿಗೆ ಭೇಟಿ ನೀಡಿ ಕುಡಿಯುವ ನೀರಿನಲ್ಲಿ ಆರ್ಸೆನಿಕ್ ಅಂಶದ ಬಗ್ಗೆ ಪರಿಶೀಲಿಸಲಿದ್ದಾರೆ. ನಂತರ ಅವರು ಮಧ್ಯಾಹ್ನ 1.30ಕ್ಕೆ ಹಟ್ಟಿ ಚಿನ್ನದ ಗಣಿಗೆ ಆಗಮಿಸಿ ಅತಿಥಿ ಗೃಹದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲೆಯಲ್ಲಿ ಆರ್ಸೆನಿಕ್ ಯುಕ್ತ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಚರ್ಚೆ, ಸಮಾಲೋಚನೆ ನಡೆಸಲಿದ್ದಾರೆ. ನಂತರ ಅವರು ಮಧ್ಯಾಹ್ನ 3ಕ್ಕೆ ಹಟ್ಟಿಯಿಂದ ಹೊರಟು ದೇವದುರ್ಗ ತಾಲೂಕಿನ ಪಲಕನಮರಡಿ, ಗಬ್ಬೂರು ಮೂಲಕ ರಾಯಚೂರು ನಗರಕ್ಕೆ ಆಗಮಿಸಿ ಬೆಂಗಳೂರಿಗೆ ಸಂಜೆ 6.50ಕ್ಕೆ ಪ್ರಯಾಣಿಸಲಿದ್ದಾರೆಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.
ಇಂದು ಕೌನ್ಸೆಲಿಂಗ್
ರಾಯಚೂರು: ಜಿಲ್ಲೆಯ ಉರ್ದು ಪ್ರಾಥಮಿಕ ಶಾಲಾ ಶಿಕ್ಷಕರನ್ನು ಮುಖ್ಯಗುರುಗಳ ಹುದ್ದೆಗೆ ಬಡ್ತಿ ನೀಡಲು ಅಂತಿಮ ಜೇಷ್ಟತಾ ಪಟ್ಟಿ ಈಗಾಗಲೇ ಪ್ರಕಟಿಸಿದ್ದು, ಅದರಂತೆ ಜೂ.17ರಂದು ಡಿಡಿಪಿಐ ಕಚೇರಿಯಲ್ಲಿ ಕೌನ್ಸೆಲಿಂಗ್ ನಡೆಯಲಿದೆ. ಈ ಕುರಿತು ಡಿಡಿಪಿಐ ಕಚೇರಿಯು ಪ್ರಕಟಣೆ ನೀಡಿದ್ದು, ಅಂದು ಮಧ್ಯಾಹ್ನ 4ಕ್ಕೆ ಕಚೇರಿಯ ಸಭಾಂಗಣದಲ್ಲಿ ಕೌನ್ಸೆಲಿಂಗ್ ನಡೆಸಲಾಗುತ್ತದೆ. ಸದರಿ ಕೌನ್ಸೆಲಿಂಗ್ಗೆ ನಿಗದಿತ ಸಮಯಕ್ಕೆ ಎಲ್ಲ ದಾಖಲೆಗಳೊಂದಿಗೆ ವೈಯಕ್ತಿಕವಾಗಿ ಹಾಜರಾಗಲು ಸಂಬಂಧಿಸಿದ ಉರ್ದು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸೂಚಿಸಲಾಗಿದೆ ಎಂದು ತಿಳಿಸಿದೆ.
ಅಧಿಕಾರ ಸ್ವೀಕಾರ
ರಾಯಚೂರು: ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಹುದ್ದೆಯನ್ನು ಪ್ರಭಾರಿಯಾಗಿ ಸಿ.ಟಿ. ಕಲ್ಲಯ್ಯ ವಹಿಸಿಕೊಂಡಿದ್ದಾರೆ. ಜೂ.10ರಿಂದ ಅವರು ಪ್ರಭಾರವಹಿಸಿಕೊಂಡಿದ್ದು, ಸರ್ಕಾರಿ, ಅರೆ ಸರ್ಕಾರಿ ಪತ್ರಗಳನ್ನು ಸಿ.ಟಿ. ಕಲ್ಲಯ್ಯ, ಪ್ರಭಾರಿ ಉಪನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣ, ರಾಯಚೂರು ಇಲ್ಲಿಗೆ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08532- 239938ಇಲ್ಲಿಗೆ ಸಂಪರ್ಕಿಸಬಹುದು ಎಂದು ಇಲಾಖೆ ತಿಳಿಸಿದೆ.
18ರವರೆಗೆ ಜಾತ್ರೆ
ರಾಯಚೂರು: ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಚಿತ್ತವಾಡಿಗಿಯ ಹೊಸೂರಮ್ಮ ದೇವಿ ಜಾತ್ರಾ ಮಹೋತ್ಸವ ಜೂ.16 ರಿಂದ ಆರಂಭಗೊಂಡಿದ್ದು ಜೂ.18ರವರೆಗೆ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement