ಕಂದಾಯ ನೌಕರರ ಸಂಘದ ಪದಾಧಿಕಾರಿಗಳು
ರಾಯಚೂರು: ಕಂದಾಯ ನೌಕರರ ಸಂಘದ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಸದಸ್ಯರ ಹಾಗೂ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ಜಿಲ್ಲಾ ಘಟಕದ ಪದಾಧಿಕಾರಿಗಳಾಗಿ ಸುಬ್ಬಾರಾವ್(ಗೌರವಾಧ್ಯಕ್ಷ), ನಾಗರಾಜ್(ಅಧ್ಯಕ್ಷ), ರವಿ ಅಂಗಡಿ(ಪ್ರಧಾನ ಕಾರ್ಯದರ್ಶಿ), ವೇಣುಮಾಧವ್(ಖಜಾಂಚಿ) ನೇಮಕಗೊಂಡಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ನಾಗರಾಜ್, ಸೂಗೂರೇಶ್ವರ ದೇಸಾಯಿ, ಶಕೀಲ್ ಅಹ್ಮದ್, ಚಂದ್ರಶೇಖರ್, ಸಿದ್ದಲಿಂಗಯ್ಯ ಸ್ವಾಮಿ, ರವಿ ಅಂಗಡಿ, ವೇಣುಮಾಧವ್, ಬಸವರಾಜ, ವಾಸವಿ, ಖಲೀಲ್ ಅಹ್ಮದ್, ಸಂಗಮೇಶ್ ಹಾಗೂ ಅರಸಪ್ಪ ಆಯ್ಕೆಯಾಗಿದ್ದಾರೆಂದು ಸಂಘ ತಿಳಿಸಿದೆ.