ಠೇವಣಿ ಹೊರೆ: ಬಾಳಪ್ಪ ಲೇವಡಿ
ಸಿಂಧನೂರು: ಸಾರ್ವಜನಿಕರಿಗೆ ಕನಿಷ್ಟ ಮಾಹಿತಿ ನೀಡದೆ ಏಕಾಏಕಿ ಠೇವಣಿಯನ್ನು ತುಂಬಬೇಕೆಂದು ಬಿಲ್ಗಳನ್ನು ಕಳುಹಿಸಿರುವುದು ಸರಿಯಲ್ಲ ಎಂದು ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರದ ರಾಜ್ಯ ಸಂಚಾಲಕ ಕೆ. ಬಾಳಪ್ಪ ಲೇವಡಿ ಮಾಡಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿ ಬೇರೆ ಬೇರೆ ವಿದ್ಯುತ್ ಗ್ರಾಹಕರಿಗೆ 500 ರಿಂದ 5000 ಠೇವಣಿ ಹಣ ಕಟ್ಟಬೇಕೆಂದು ಜೆಸ್ಕಾಂ ಇಲಾಖೆಯವರು ಬಿಲ್ ಕಳುಹಿಸಿದ್ದಾರೆ. ಹಣ ಕಟ್ಟದ ಮನೆ, ಅಂಗಡಿಗಳ ವಿದ್ಯುತ್ ಕಡಿತಗೊಳಿಸಿದ್ದಾರೆ. ನಾಲ್ಕೈದು ದಶಕಗಳಿಂದ ಯಾವ ಸರ್ಕಾರಗಳು ಇಂತಹ ಕ್ರಮಕೈಗೊಂಡಿರಲಿಲ್ಲ. ನೂತನವಾಗಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಮಾಹಿತಿ ನೀಡದೆ. ಒಮ್ಮಿಂದೊಮ್ಮೆಲೇ ಬಿಲ್ ಕಳುಹಿಸಿರುವುದು ಜನವಿರೋಧಿ ನೀತಿಯಾಗಿದೆ. ಇಲಾಖೆ ಹೊರಡಿಸಿರುವ ಸುತ್ತೋಲೆಯನ್ನು ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ಉಗ್ರ ಹೋರಾಟ ರೂಪಿಸುವುದಾಗಿ ಎಚ್ಚರಿಸಿದ್ದಾರೆ.