ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನಾಗರಿಕರ ಸಮಸ್ಯೆ ಆಲಿಸಿದ ಶಾಸಕ ಬಾದರ್ಲಿ

Lingaraj Badiger
Updated On : 17 Jun 2013, 11:03 am

ಕನ್ನಡಪ್ರಭ ವಾರ್ತೆ, ಸಿಂಧನೂರು, ಜೂ.16
ನಗರದ ವಾರ್ಡ್ 1ರಿಂದ 5ರವರೆಗೆ ಶಾಸಕ ಹಂಪನಗೌಡ ಬಾದರ್ಲಿ ಶನಿವಾರ ಭೇಟಿ ನೀಡಿ ನಾಗರಿಕರಿಂದ ಅಹವಾಲುಗಳನ್ನು ಕೇಳಿ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.
ವಾರ್ಡ್ 2ರ ನಿವಾಸಿಗಳು ತಮ್ಮ ಓಣಿಯಲ್ಲಿ ಚರಂಡಿ ಸ್ವಚ್ಛತೆಗೊಳಿಸದೆ ಹೊಲಸು ನಾರುತ್ತಿವೆ. ಘನತ್ಯಾಜ್ಯ ಸರಿಯಾಗಿ ವಿಲೇವಾರಿಯಾಗುತ್ತಿಲ್ಲ. ಇದರಿಂದಾಗಿ ರೋಗದ ಭೀತಿ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲೇ ಇದ್ದ ನಗರಸಭೆ ಪೌರಾಯುಕ್ತ ನಾಸೀರ್ ಅಲಿ ಅವರಿಗೆ ಚರಂಡಿಗಳನ್ನು ಕೂಡಲೇ ಸ್ವಚ್ಛಗೊಳಿಸಿ ಘನತ್ಯಾಜ್ಯ ವಸ್ತುಗಳನ್ನು ಸಾಗಿಸುವ ವ್ಯವಸ್ಥೆ ಕಲ್ಪಿಸಬೇಕೆಂದು ಸೂಚಿಸಿದರು.
ವಾರ್ಡ್ 3ರಲ್ಲಿನ ನಿವಾಸಿಗಳು ತಮ್ಮ ಬಡಾವಣೆಯಲ್ಲಿ ಸರಿಯಾದ ರಸ್ತೆಗಳಿಲ್ಲ. ಮಹಿಳಾ ಶೌಚಾಲಯವಿಲ್ಲದೆ ತೊಂದರೆಯಾಗಿದೆ. ಕುಡಿವ ನೀರು 5 ದಿನಕ್ಕೊಮ್ಮೆ ಬಿಟ್ಟರೂ ಸರಿಯಾದ ಸಮಯಕ್ಕೆ ಬಿಡುತ್ತಿಲ್ಲ ಎಂದು ಹೇಳಿದಾಗ, ಸರ್ಕಾರದ ಅನುದಾನದಲ್ಲಿ ಮಹಿಳಾ ಶೌಚಾಲಯಗಳಿಂದ ಕ್ರಮ ಕೈಗೊಳ್ಳಲಾಗುವುದು. ಮುಂಗಾರು ಮಳೆ ಆರಂಭವಾಗಿರುವುದರಿಂದ ಕುಡಿವ ನೀರಿನ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಹೇಳಿದರು.
ಈ ವೇಳೆ ಕಾಂಗ್ರೆಸ್ ಮುಖಂಡ ಗಿರಾಮಿಪಾಷಾ ಜಾಗೀರದಾರ, ನಗರಸಭೆ ಸದಸ್ಯರಾದ ಜಾಫರ ಅಲಿ ಜಾಗೀರದಾರ, ಪ್ರಭುರಾಜ, ಶೇಖರಪ್ಪ ಗಿಣಿವಾರ, ವೆಂಕಟೇಶ ಬಂಡಿ, ಶರಣಯ್ಯಸ್ವಾಮಿ, ನಬೀಸಾಬ, ನಗರಸಭೆ ಎಇಇ ಗಂಗಾಧರ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement