ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬಾಲಕಿ ಮೇಲೆ ಅತ್ಯಾಚಾರ ಯತ್ನ

Lingaraj Badiger
Updated On : 17 Jun 2013, 11:08 am

ಸಿಂಧನೂರು: ನಗರದ ಮಹಿಬೂಬಿಯಾ ಕಾಲೋನಿಯ ಗಿರಿಜಾ ಮಹಿಳಾ ಕಾಲೇಜು ಹಿಂಬದಿ ವಾಸವಾಗಿರುವ ಬ್ಯಾಂಕಿನ ಅಧಿಕಾರಿಯೊಬ್ಬರು ಮನೆಯ ಮುಂದೆ ಆಟವಾಡುತ್ತಿದ್ದ 5 ವರ್ಷದ ಬಾಲಕಿ ಮೇಲೆ ಭಾನುವಾರ ಮಧ್ಯಾಹ್ನ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್ ಗಂಗಾವತಿ ಶಾಖೆಯಲ್ಲಿ ಕೆಲಸ ಮಾಡುವ ಓಬ್ಬಣ್ಣ ಎಂಬ ಅಧಿಕಾರಿ ತಮ್ಮ ಮನೆಯ ಮಾಳಿಗೆಯ ಮೇಲೆ ನಿಂತಿದ್ದ. ಮನೆಯ ಎದುರುಗಡೆ ಆಟವಾಡುತ್ತಿದ್ದ ಬಾಲಕಿಯನ್ನು ಕೈಸನ್ನೆ ಮಾಡಿ ಮಾಳಿಗೆಯ ಮೇಲೆ ಬರುವಂತೆ ಕರೆದಿದ್ದಾನೆ. ಅಲ್ಲಿಗೆ ತೆರಳಿದ ಬಾಲಕಿ ನಂತರ ಸ್ವಲ್ಪ ಹೊತ್ತಿನಲ್ಲೇ ಅಳುತ್ತಾ ಬಂದು ವಿಷಯ ತಿಳಿಸಿದಳೆಂದು ಬಾಲಕಿ ಸಂಬಂಧಿಕರಾದ ಶ್ರೀಕಾಂತ, ಹನುಮಂತ, ಹನುಮ, ಮಾರುತಿ ಹೇಳಿದ್ದಾರೆ.
ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ವೈದ್ಯರ ವರದಿ ಬಂದ ನಂತರ ನಿಜಾಂಶ ಬಯಲಾಗಲಿದೆ ಎಂದು ಶಹರ ಠಾಣೆ ಪಿಎಸ್ಐ ಲಿಂಗಪ್ಪ ತಿಳಿಸಿದ್ದಾರೆ. ಈ ಕುರಿತು ಸಿಂಧನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement