ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಹೋರಾಟಗಾರ ವಿ.ಎಚ್.ಮಾಸ್ತರ್ ನಿಧನ

Rashmi Kasaragodu
Updated On : 17 Jun 2013, 12:53 pm

ರಾಯಚೂರು: ಹಿರಿಯ ಕಾರ್ಮಿಕ ಮುಖಂಡ, ಹೋರಾಟಗಾರ ವಿ.ಎಚ್.ಮಾಸ್ತರ್ ಅವರು ಭಾನುವಾರ ಬೆಳಗ್ಗೆ ನಗರದಲ್ಲಿ ನಿಧನರಾದರು.
ಅವರು ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧುಗಳನ್ನಗಲಿದ್ದಾರೆ. ಇವರು ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಮುಂದಿರಿಸಿಕೊಂಡು ಹೋರಾಟ ಸಂಘಟಿಸಿದ್ದರು. ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಹೋರಾಡುವಲ್ಲಿ ಹೆಸರಾಗಿದ್ದರು. ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸಿಪಿಐಎಂಎಲ್ ಪಕ್ಷದಿಂದ ಕಳೆದ ಆರು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋತಿದ್ದರು. ಕಾರ್ಮಿಕ ಮುಖಂಡ ವಿ.ಎಚ್.ಮಾಸ್ತರ್ ಅವರ ನಿಧನಕ್ಕೆ ಕಾರ್ಮಿಕ ಸಂಘಗಳ ಜಂಟಿ ಸಮಿತಿ ತೀವ್ರ ಶೋಕ ವ್ಯಕ್ತಪಡಿಸಿದೆ. ಮಾಸ್ತರ್ ಅವರು ಆಲ್ ಇಂಡಿಯಾ ಫೆಡರೇಷನ್ ಆಫ್ ಟ್ರೇಡ್ ಯೂನಿಯನ್ಸ್ ಅಖಿಲ ಭಾರತ ಮಟ್ಟದ ಮುಖಂಡರಾಗಿದ್ದು, ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಅನೇಕ ಹೋರಾಟಗಳನ್ನು ನಡೆಸಿದ್ದರು ಎಂದು ಸಮಿತಿಯ ಸಂಚಾಲಕ ಜೆ.ಎಂ. ಚನ್ನಬಸಯ್ಯ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement