ಅಲ್ಪಸಂಖ್ಯಾತರ ತರಬೇತಿಗೆ ಆಹ್ವಾನ
ರಾಯಚೂರು: ಮತೀಯ ಅಲ್ಪಸಂಖ್ಯಾತರರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್ ಸಮುದಾಯಕ್ಕೆ ಸೇರಿದ ಯುವಕ- ಯುವತಿಯರಿಗಾಗಿ ಪ್ರಸಕ್ತ ಸಾಲಿಗೆ ವಿವಿಧ ತರಬೇತಿಗೆ ಅರ್ಜಿ ಕರೆಯಲಾಗಿದೆ. ವೈರ್ಮೆನ್, ಏರ್ ಕಂಡಿಷನ್ ದುರಸ್ತಿ, ಸಿವಿಲ್ ಎಂಜಿನಿಯರಿಂಗ್ ವರ್ಕ್ಸ್, ಎಲೆಕ್ಟ್ರಿಕಲ್ ಅಪ್ಲಾಯಿನ್ಸಸ್ ಸೇರಿ ವಿವಿಧ ಕೋಸುಗಳಿಗೆ 3, 6 ಮತ್ತು 12 ತಿಂಗಳ ತರಬೇತಿ ನೀಡಲಾಗುತ್ತದೆ. ತರಬೇತಿ ವೇಳೆ ಭತ್ಯೆ ನೀಡಲಾಗುತ್ತದೆ. ಎಸ್ಸೆಸ್ಸೆಲ್ಸಿ ಪಾಸಾದವರು 18ರಿಂದ 40 ವರ್ಷ ವಯೋವಾನದವರು ಹಾಗೂ ವಾರ್ಷಿಕ ಆದಾಯ 48 ಸಾವಿರಕ್ಕಿಂತ ಕಡಿಮೆ ಇರುವವರು ಅರ್ಜಿ ಸಲ್ಲಿಸಬಹುದು. ಜಿಲ್ಲೆಯ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ತರಬೇತಿ ನೀಡಲಾಗುವುದು. ಅರ್ಜಿ ಸಲ್ಲಿಸಲು ಜು.15 ಕಡೆಯ ದಿನವಾಗಿದೆ. ನಿಗದಿತ ಅರ್ಜಿ ನಮೂನೆಗಳನ್ನು ಹಿಂದುಳಿದ ವರ್ಗಗಳ ಕಚೇರಿಯಿಂದ ಪಡೆದು ಅವಶ್ಯಕ ದಾಖಲೆಗಳೊಂದಿಗೆ ಜಿಲ್ಲಾ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಅಧಿಕಾರಿಗಳು ಇವರಿಗೆ ಸಲ್ಲಿಸಲು ಕೋರಲಾಗಿದೆ.