ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಕೇಂದ್ರದ ಹಣ ಪೂರ್ಣ ಬಳಕೆಗೆ ಬದ್ಧ'

Vishwanath S
Updated On : 18 Jun 2013, 11:36 am

ರಾಯಚೂರು: ಕೇಂದ್ರ ಸರ್ಕಾರ ಕುಡಿಯುವ ನೀರಿನ ಯೋಜನೆಗಳಿಗೆ ರಾಜ್ಯಕ್ಕೆ ನೀಡಿದ 1,100 ಕೋಟಿಯಲ್ಲಿ ಕಳೆದ ಅವಧಿಯ ಸರ್ಕಾರವು ಕೇವಲ 116 ಕೋಟಿ ಬಳಕೆ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರ ಈ ಅನುದಾನದ ಪೂರ್ಣ ಪ್ರಮಾಣದ ಬಳಕೆಗೆ ಅಗತ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಸಚಿವ ಎಚ್.ಕೆ. ಪಾಟೀಲ್ ಹೇಳಿದರು. ನಗರದಲ್ಲಿ ಸೋಮವಾರ ರಾತ್ರಿ ಅಧಿಕಾರಿಗಳ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಸರ್ಕಾರ ಕೇವಲ ಶೇ.10ರಿಂದ 15ರಷ್ಟು ಅನುದಾನ ಮಾತ್ರ ಬಳಕೆ ಮಾಡಿದೆ. ಆದರೆ ಕಾಂಗ್ರೆಸ್ ಸರ್ಕಾರ ಪೂರ್ಣ ಅನುದಾನ ಬಳಕೆ ಮಾಡಲಿದೆ ಎಂದು ಹೇಳಿದರು. ರಾಜ್ಯದಲ್ಲಿ ಉಪಗ್ರಹ ಮೂಲಕ ಪತ್ತೆ ಮಾಡಲಾದ ಆರ್ಸೆನಿಕ್ ಯುಕ್ತ ನೀರು ಪೂರೈಕೆಯಾಗುತ್ತಿರುವ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರೊದಗಿಸುವುದು ಸರ್ಕಾರದ ಮೊದಲಾದ್ಯತೆಯಾಗಿದೆ. ಇದಕ್ಕೆ ಕಾಲಮಿತಿಯನ್ನು ಅಧಿಕಾರಿಗಳು ಶೀಘ್ರ ನಿಗದಿ ಮಾಡಲಿದ್ದಾರೆ ಎಂದು ಹೇಳಿದರು.
ಕಲಂ 371(ಜೆ) ಶಿಪಾರಸ್ಸು ಸಾರ್ವಜನಿಕರ ಗಮನಕ್ಕೆ: 371(ಜೆ)ನೇ ಕಲಂ ಅಡಿ ವಿಶೇಷ ಸ್ಥಾನಮಾನಕ್ಕಾಗಿನ ಕಾನೂನು ರಚಿಸಲು ಸಂಪುಟದ ಉಪಸಮಿತಿಯ ಎರಡನೇ ಸಭೆಯನ್ನು ಜೂ.19ರಂದು ಕರೆದಿದ್ದು ಆ ಸಭೆಯಲ್ಲಿ ಹೈ.ಕ. ಭಾಗದ ಜನರ ಆಶಯಕ್ಕೆ ತಕ್ಕಂತೆಯೇ ವರದಿ ಅಂತಿಮಗೊಳಿಸಿ ಸರ್ಕಾರಕ್ಕೆ ಕರಡು ಪ್ರತಿ ಸಲ್ಲಿಸಲಾಗುತ್ತದೆ. ಶಿಫಾರಸುಗಳನ್ನು ಸರ್ಕಾರಕ್ಕೆ ಸಲ್ಲಿಸುವ ಮೊದಲು ಸಾರ್ವಜನಿಕರ ಗಮನಕ್ಕೆ ತಿಳಿಸಲಾಗುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement