ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬಯ್ಯಾಪುರಗೆ ಎಂಪಿ ಟಿಕೆಟ್ ನೀಡಿ

Vishwanath S
Updated On : 19 Jun 2013, 12:21 pm

ಮುದಗಲ್: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ್ ಅವರಿಗೆ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅದ್ಧೂರಿ ಸ್ವಾಗತ ನೀಡಿದರು.
ಮುದಗಲ್ ಮಾರ್ಗವಾಗಿ ಹಟ್ಟಿ ಚಿನ್ನದ ಗಣಿಗೆ ಹೋಗುತ್ತಿರವಾಗ ಬ್ಲಾಕ್ ಕಾಂಗ್ರೆಸ್ ಪರವಾಗಿ ಸ್ವಾಗತಿಸಿದ ಬಳಿಕ ಈ ಭಾಗದ ಮುಖಂಡರು ಮಾಜಿ ಮಂತ್ರಿಗಳಾದ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರಿಗೆ ಕೊಪ್ಪಳ ಲೋಕಸಭೆ ಟಿಕೆಟ್ ನೀಡಬೇಕು, ಲಿಂಗಸ್ಗೂರು ಕ್ಷೇತ್ರದಿಂದ ಅತಿ ಕಡಿಮೆ ಮತಗಳ ಅಂತರದಿಂದ ಸೋತಿರುವ ಡಿ.ಎಸ್. ಹೂಲಗೇರಿ ಅವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು. ಅಧ್ಯಕ್ಷ ಮುನ್ವರಖಾನ, ಪ.ಪಂ.ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ರಾಮಣ್ಣ ಹಿರೇಮನಿ, ಮುಖಂಡರಾದ ಸುರೇಶಗೌಡ ಪಾಟೀಲ್, ಸುರೇಶ ಶೇಠ, ಮಹಾಂತೇಶ ಪಾಟೀಲ್, ಪ.ಪಂ.ಸದಸ್ಯ ಮಾಸುಮ ಶರೀಫ್, ರಾಮಣ್ಣ, ನಂದಪ್ಪ, ರಾಘವೇಂದ್ರ ದೇಶಪಾಂಡೆ, ಶಿವರಾಜ ತಳವಾರ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement