ವಿಶೇಷ ಘಟಕ: ರೈತರಿಗೆ ಆಕಳು, ಕುರಿ ವಿತರಣೆ
ರಾಯಚೂರು: ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯ ಅಡಿ ಸಮಗ್ರ ಕೃಷಿ ಪದ್ಧತಿಯ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರ ಅಭಿವೃದ್ಧಿ ಕಾರ್ಯಕ್ರಮದ ಅಂಗವಾಗಿ ತರಬೇತಿ ಕಾರ್ಯಕ್ರಮ ಮತ್ತು ಕುರಿ, ಆಕಳು, ಕೃಷಿ ಪರಿಕರಗಳ ವಿತರಣೆ ಇತ್ತೀಚೆಗೆ ಇಲ್ಲಿನ ಕೃಷಿ ವಿವಿಯಲ್ಲಿ ನಡೆಯಿತು.
ವಿವಿ ಕುಲಪತಿ ಡಾ. ಬಿ.ವಿ. ಪಾಟೀಲ್ ರೈತರಿಗೆ ಆಕಳು, ಕುರಿ ಹಾಗೂ ಕೃಷಿ ಪರಿಕರಗಳನ್ನು ವಿತರಿಸಿದರು. ಕೃಷಿ ವಿವಿ ಪ್ರಮುಖರಾದ ಡಾ. ಬಿ.ಕೆ. ದೇಸಾಯಿ, ಸಂಶೋಧನಾ ನಿರ್ದೇಶಕ ಡಾ. ಬಿ.ಎಸ್. ಜನಗೌಡರ್, ಪ್ರಾಣಿತಜ್ಞ ಡಾ. ಪ್ರಹ್ಲಾದ ರೈತರಿಗೆ ವಿವಿಧ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಡಾ. ಶಂಕರಗೌಡ, ಡಾ. ಬಿ.ಎಂ. ಚಿತ್ತಾಪೂರ ಭಾಗವಹಿಸಿದ್ದರು.
--