ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ವರ್ಗಾವಣೆಗೆ ಖೊಟ್ಟಿ ದಾಖಲೆ: ತನಿಖೆಗೆ ಆಗ್ರಹ

Vishwanath S
Updated On : 22 Jun 2013, 10:51 am

ರಾಯಚೂರು: ಅಂತರ ಜಿಲ್ಲಾ ವರ್ಗಾವಣೆಯ ಅರ್ಜಿಗಳ ಸಲ್ಲಿಕೆಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ಸಮಗ್ರ ತನಿಖೆ ಕೈಗೊಳ್ಳುವಂತೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕ ಆಗ್ರಹಿಸಿದೆ.
ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳಿಗೆ ದೂರು ಸಲ್ಲಿಸಿರುವ ಸಂಘದ ಅಧ್ಯಕ್ಷ ಜಿ.ತಿಮ್ಮಣ್ಣ, ವರ್ಗಾವಣೆ ಪಡೆಯುವ ಉದ್ದೇಶದಿಂದ ಖೊಟ್ಟಿ ಅಂಗವೈಕಲ್ಯತೆಯ ಪ್ರಮಾಣ ಪತ್ರ ಲಗತ್ತಿಸಿ ಅರ್ಜಿ ಸಲ್ಲಿಸಿರುವ ಬಗ್ಗೆ ದೂರುಗಳು ಕೇಳಿಬಂದಿದ್ದು, ಇಲಾಖೆಯ ಹಿರಿಯ ಅಧಿಕಾರಿಗಳು ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ನೇಮಕಾತಿ ವೇಳೆ ಅಂಗವೈಕಲ್ಯತೆಯಿಲ್ಲದಿದ್ದರೂ ವರ್ಗಾವಣೆ ವೇಳೆ ಪ್ರಮಾಣ ಪತ್ರ ಲಗತ್ತಿಸಿದ್ದು, ಇದರ ಹಿಂದೆ ಶಿಕ್ಷಣ ಇಲಾಖೆಯ ಗುಮಾಸ್ತರೂ ಸೇರಿದಂತೆ ಮೇಲಧಿಕಾರಿಗಳವರೆಗೆ ಎಲ್ಲರೂ ಅಕ್ರಮದಲ್ಲಿ ಶಾಮೀಲಾಗಿರುವುದು ಸ್ಪಷ್ಟವಾಗಿದೆ ಎಂದು ಆರೋಪಿಸಿದ್ದಾರೆ. ಖೊಟ್ಟಿ ದಾಖಲೆಗಳನ್ನು ಸಲ್ಲಿಸಿ ವರ್ಗಾವಣೆ ಪಡೆಯುವ ಹುನ್ನಾರ ನಡೆಸಿರುವ ಕೆಲವೇ ಕೆಲವರಿಂದಾಗಿ ನಿಜವಾಗಿಯೂ ಅಂಗವೈಕಲ್ಯದ ಸಮಸ್ಯೆಯಿಂದ ತೊಂದರೆ ಎದುರಿಸುತ್ತಿರುವವರು ವರ್ಗಾವಣೆಯಿಂದ ವಂಚಿತರಾಗುವ ಸಾಧ್ಯತೆಯಿದೆ ಎಂದು ಅವರು ದೂರಿದ್ದಾರೆ.
ಇಲಾಖೆಯಲ್ಲಿ ದಕ್ಷ ಹಾಗೂ ಪ್ರಾಮಾಣಿಕರೆಂದು ಕರೆಯಿಸಿಕೊಂಡವರಿಂದಲೇ ಸದ್ಯ ಇಂಥ ಅಕ್ರಮಕ್ಕೆ ದಾರಿಯಾಗಿದ್ದು, ಪ್ರಕರಣ ಮುಚ್ಚಿ ಹಾಕುವ ಕಾರ್ಯ ನಡೆದಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಅರ್ಹರಿಗೆ ಅನ್ಯಾಯವಾಗದಂತೆ ತಡೆಯಬೇಕು. ತಪ್ಪಿದಲ್ಲಿ ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಕ್ರಮಕ್ಕೆ ಆಗ್ರಹಿಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement