ಇಂದು ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ
ಸಿಂಧನೂರು: ದಲಿತ ಸೇನೆ ವತಿಯಿಂದ ನಾಳೆ ಜೂ.24 ರಂದು ವೆಂಕಟೇಶ್ವರ ಪ್ರೌಢಶಾಲೆಯಲ್ಲಿ ಬಡ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಣೆ ಮತ್ತು ಪ್ರತಿಭಾವಂತರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸೇನೆ ಪ್ರಧಾನ ಕಾರ್ಯದರ್ಶಿ ನೂರಪ್ಪ ಕಟ್ಟಿಮನಿ ತಿಳಿಸಿದ್ದಾರೆ.
ಕಾರ್ಯಕ್ರಮದ ಸಾನ್ನಿಧ್ಯವನ್ನು ದೇವರಗುಡಿ ಸಂಸ್ಥಾನ ಮಠದ ಬಸಯ್ಯಸ್ವಾಮಿ ಚಿಕ್ಕಯ್ಯ ಶರಣರು ವಹಿಸುವರು. ಸಮಾರಂಭದ ಉದ್ಘಾಟನೆಯನ್ನು ಮಕ್ಕಳ ತಜ್ಞ ಡಾ.ಶಿವರಾಜ ನೆರವೇರಿಸುವರು. ಗೌರವಾಧ್ಯಕ್ಷತೆಯನ್ನು ಬಿಎಸ್ಆರ್ ಪಕ್ಷದ ಮುಖಂಡ ಕೆ.ಕರಿಯಪ್ಪ ವಹಿಸುವರು. ಅಧ್ಯಕ್ಷತೆಯನ್ನು ದಲಿತ ಸೇನೆ ಮತ್ತು ಸಿಂಧೂರ ಪ್ರಜಾರಕ್ಷಣಾ ಸೇನೆಯ ಅಧ್ಯಕ್ಷ ನಾಗರಾಜ ಬೊಮ್ಮನಾಳ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಪಂ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ, ನಗರಸಭೆ ಸದಸ್ಯ ಕೆ.ಮರಿಯಪ್ಪ, ಬಿಜೆಪಿ ಯುವ ಮುಖಂಡ ಶಿವಬಸನಗೌಡ ಗೊರೇಬಾಳ, ತಹಸೀಲ್ದಾರ್ ಬಿ.ಟಿ. ಕುಮಾರಸ್ವಾಮಿ, ಡಿವೈಎಸ್ಪಿ ಎಂ.ಎಂ. ದೇಸಾಯಿ, ಬಿಇಒ ವೃಷಬೇಂದ್ರಯ್ಯಸ್ವಾಮಿ, ನಗರ ಠಾಣೆ ಪಿಎಸ್ಐ ಎನ್.ಆರ್.ಲಿಂಗಪ್ಪ, ಜಿಪಂ ಎಇಇ ಬಿ.ಆರ್.ಗೌಡೂರು, ಗುನ್ನೇಶ್ವರರಾವ್, ಬಿಎಸ್ಪಿ ಮಾಜಿ ಜಿಲ್ಲಾಧ್ಯಕ್ಷ ಪಂಪಾಪತಿ ಗುಡದೂರು, ತಾಪಂ ಸದಸ್ಯ ರಾಮಕೃಷ್ಣ ದೇವಿಕ್ಯಾಂಪ್, ಯುವ ಮುಖಂಡ ಹನುಮಂತ ಗೊರೇಬಾಳ, ಬಿಜೆಪಿ ಎಸ್.ಟಿ. ಘಟಕದ ಅಧ್ಯಕ್ಷ ಅಂಬಣ್ಣ ಗೊಬ್ಬರಕಲ್ ಭಾಗವಹಿಸುವರು. ಸಿಂಧೂರ ಪ್ರಜಾರಕ್ಷಣಾ ಸೇನೆಯ ಕಾರ್ಯಾಧ್ಯಕ್ಷ ಕೆ.ಬಸವರಾಜ, ಸುದ್ದಿಬಿಂಬ ದಿನಪತ್ರಿಕೆ ಸಂಪಾದಕ ಡಿ.ಎಚ್. ಕಂಬಳಿ ಭಾಷಣಕಾರರಾಗಿ ಆಗಮಿಸುವರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ.