ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕೃಷ್ಣಾ ಜಿಲ್ಲೆಗೆ ಪ್ರಥಮ ಸ್ಥಾನ

Vishwanath S
Updated On : 24 Jun 2013, 11:31 am

ರಾಯಚೂರು: ನಗರದಲ್ಲಿ ನಡೆಯುತ್ತಿರುವ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಎರಡನೇ ದಿನವಾದ ಭಾನುವಾರ ನಡೆದ ಎರಡು ಟನ್ ಭಾರದ ಕಲ್ಲು ಎಳೆಯುವ ಅಖಿಲ ಭಾರತ ಮಟ್ಟದ ಸ್ಪರ್ಧೆಯಲ್ಲಿ ಆಂಧ್ರದ ಕೃಷ್ಣಾ ಜಿಲ್ಲೆಯ ಕೆ.ಎನ್. ರಾವ್ ಅವರ ಎತ್ತುಗಳು ಪ್ರಥಮ ಸ್ಥಾನ ಪಡೆದವು.
ರಾಜೇಂದ್ರ ಗಂಜ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ನಿಗದಿತ 20 ನಿಮಿಷದಲ್ಲಿ ಕೆ.ಎನ್.ರಾವ್ ಅವರ ಎತ್ತುಗಳು 3004.8 ಅಡಿ ದೂರ ಕಲ್ಲು ಎಳೆಯುವ ಮೂಲಕ ಪ್ರಥಮ ಬಹುಮಾನವಾಗಿ 60 ಸಾವಿರ ಪಡೆದವು. ಕರ್ನೂಲ್ ಜಿಲ್ಲೆಯ ಗೀತಾ ಮೆಹ್ತಾ ಚೌಧರಿ ಅವರ ಎತ್ತುಗಳು 3ಸಾವಿರ ಅಡಿ ದೂರ ಎಳೆಯುವ ಮೂಲಕ ದ್ವಿತೀಯ ಬಹುಮಾನ 45 ಸಾವಿರ ಪಡೆದವು.
ಕರ್ನೂಲ್ ಜಿಲ್ಲೆಯ ಜಿಲ್ಲಾಲ ಗ್ರಾಮದ ಗೋಟಿಕನಗರೆಡ್ಡಿ ಅವರ ಎತ್ತುಗಳು 2100ಅಡಿ ದೂರ ಎಳೆದು ಮೂರನೇ ಸ್ಥಾನ ಗಳಿಸಿ 35 ಸಾವಿರ ಪಡೆದರೆ, ಆಂಧ್ರದ ವನಪರ್ತಿಯ ಜಂಗಡಿರಾಜು ಅವರ ಎತ್ತುಗಳು 2038.11 ಅಡಿ ಎಳೆಯುವ ಮೂಲಕ ನಾಲ್ಕನೇ ಬಹುಮಾನ 25 ಸಾವಿರ ಪಡೆದವು.
ಕೊಡೇಕಲ್‌ನ ರಾಜುಗೌಡ ಅವರ ಎತ್ತುಗಳು ಐದನೇ ಸ್ಥಾನದಲ್ಲಿ ಬಂದು 1892.03 ಅಡಿ ದೂರ ಎಳೆದು 20 ಸಾವಿರ ಬಹುಮಾನ ಗಳಿಸಿದರೆ, ಮಲದಕಲ್ ಗ್ರಾಮದ ಬಿ. ರಾಮುಲು ಅವರ ಎತ್ತುಗಳು 1830.06 ಅಡಿ ದೂರ ಭಾರದ ಕಲ್ಲು ಎಳೆದು 10 ಸಾವಿರ ಬಹುಮಾನ ಪಡೆದವು.
ನಗರದಲ್ಲಿ ಭಾನುವಾರ ನಡೆದ ಎರಡು ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ ಒಟ್ಟು 10 ಜೋಡಿ ಎತ್ತುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ವಿಜೇತ ಎತ್ತುಗಳ ಮಾಲೀಕರಿಗೆ ರಾಯಚೂರು ಹಬ್ಬದ ರೂವಾರಿ ಹಾಗೂ ಮಾಜಿ ಶಾಸಕ ಪಾಪಾರೆಡ್ಡಿ ಮತ್ತು ಮುನ್ನೂರು ಕಾಪು ಸಮಾಜದ ಪ್ರಮುಖರು ಬಹುಮಾನ ವಿತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement