ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮುದಗಲ್ ಪ.ಪಂ. ಸದಸ್ಯರಿಗೆ ಮಾಹಿತಿ ಕಾರ್ಯಾಗಾರ

Vishwanath S
Updated On : 24 Jun 2013, 11:32 am

ಮುದಗಲ್: ಸ್ಥಳೀಯ ಸಮುದಾಯ ಆರೋಗ್ಯ ಕೇದ್ರದಲ್ಲಿ ಮುದಗಲ್ ಪ.ಪಂ. ಸದಸ್ಯರಿಗೆ ಮಲೇರಿಯಾ ಮಾಸಾಚರಣೆ ನಿಮಿತ್ತ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ರಾಜೇಂದ್ರಕುಮಾರ ಮನಗೊಳಿ ಮಾತನಾಡಿ, ನಾವು ವಾಸಿಸುವ ಪ್ರದೇಶ, ಪಟ್ಟಣವನ್ನು ಸ್ವಚ್ಛವಾಗಿಡುವುದರಿಂದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು. ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳನ್ನು ಹತೋಟಿಗೆ ತರಬಹುದಾಗಿದ್ದು, ಪಟ್ಟಣದಲ್ಲಿ ಸ್ವಚ್ಛತೆ  ಕಾಪಾಡುವಲ್ಲಿ ಪಟ್ಟಣದ ನಾಗರೀಕರು ಶ್ರಮಿಸಬೇಕು. ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳನ್ನು ವಿವರಿಸಿದರು. ಆರೋಗ್ಯ ಇಲಾಖೆಯೊಂದಿಗೆ ಪ.ಪಂ. ನವರು ಕೈಜೋಡಿಸಿದರೆ ರೋಗಗಳನ್ನು ನಿಯಂತ್ರಿಸುವಲ್ಲಿ ಸಹಕಾರಿ ಎಂದು ಅಭಿಪ್ರಾಯಪಟ್ಟರು. ಪಟ್ಟಣದ ಸ್ವಚ್ಛತೆಗೆ ಪ.ಪಂ. ಮುಂದಾಗುವುದು, ಸೈಲೋಥ್ರೀನ್ ಎಂಬ ಸಿಂಪಡಣೆಯನ್ನು ಪ್ರತಿ ಮನೆಗಳಲ್ಲಿ ಹಾಗೂ ಚರಂಡಿ ಸುತ್ತ ಸಿಂಪಡಿಸಬೇಕು. ನಾನಾ ಬಗೆಯ ಕ್ರಮಗಳನ್ನು ಕೈಗೊಳ್ಳುವುದರಿಂದ ಸಾಂಕ್ರಾಮಿಕ ರೋಗಗಳ ಹತೋಟಿಯಾಗುವುವು ಎಂದರು.
ಪ.ಪಂ. ಮುಖ್ಯಾಧಿಕಾರಿ ಎಂ ವಿಜಯಲಕ್ಷ್ಮೀ, ಡಾ. ಸಂಗನಗೌಡ ಡಿಗ್ಗಿ, ಪ.ಪಂ. ಸದಸ್ಯರಾದ ವೀರೇಶ ವಡ್ಡರ್, ಹೇಮಂತ ನಾಗಲಾಪುರ, ವೀರಭದ್ರಪ್ಪ ಕೊಳ್ಳಿ, ಅಬ್ದುಲ್ ರೌಫ್, ಬಂದೇನವಾಜ್ ಬಡಿಗೇರ್, ಖಾಜಾಪಾಶಾ ಗಾಡಿವಾನ, ಶಿವರಾಜ ತಳವಾರ, ಎಪಿಎಂಸಿ ಉಪಾಧ್ಯಕ್ಷ ಎಸ್.ಆರ್. ರಸೂಲ್ ಸೇರಿದಂತೆ ಪ.ಪಂ.ನ ನೂತನ ಸದಸ್ಯರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement