ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕರ್ನಾಟಕ ಪ್ರಸ್ತಾಪಿಸಿದರೆ ತುಂಗಭದ್ರಾ ಹೂಳು ತೆರವಿಗೆ ಪರಿಶೀಲನೆ: ಅರುಣಾ

Lingaraj Badiger
Updated On : 25 Jun 2013, 11:57 am

ರಾಯಚೂರು: ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹವಾಗಿರುವ ಹೂಳು ತೆರವಿಗೆ ಸಂಬಂಧಿಸಿ ಕರ್ನಾಟಕ ಸರ್ಕಾರ ಆಂಧ್ರಕ್ಕೆ ಪ್ರಸ್ತಾವನೆ ಮುಂದಿರಿಸಿದಲ್ಲಿ ನೀರಾವರಿ ಇಲಾಖೆಯು ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಿದೆ ಎಂದು ಆಂಧ್ರದ ವಾರ್ತಾ ಖಾತೆ ಸಚಿವೆ ಡಿ.ಕೆ. ಅರುಣಾ ಭರತಸಿಂಹರೆಡ್ಡಿ ಹೇಳಿದರು.
ಅವರು ನಗರದಲ್ಲಿ ಸೋಮವಾರ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದಲ್ಲಿ ಪಾಲ್ಗೊಳ್ಳಲು ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕ ಸರ್ಕಾರ ತುಂಗಭದ್ರಾ ಜಲಾಶಯದಲ್ಲಿನ ಹೂಳು ತೆರವಿನ ವಿಷಯದ ಕುರಿತು ಇದುವರೆಗೆ ಆಂಧ್ರ ಸರ್ಕಾರದ ಜತೆ ಚರ್ಚಿಸಿಲ್ಲ ಎಂದರು.
ನೀರಿನ ಕೊರತೆ: ಕರ್ನಾಟಕ ಮತ್ತು ಆಂಧ್ರ ಜಂಟಿ ನೀರಾವರಿ ಯೋಜನೆ ರಾಜಲಬಂಡಾ ತಿರುವು ನಾಲಾ ಯೋಜನೆ ಅಡಿ ಕರ್ನಾಟಕದ ರೈತರು ಅಕ್ರಮವಾಗಿ ಹೆಚ್ಚಿನ ಪ್ರದೇಶದಲ್ಲಿ ನೀರಾವರಿ ಮಾಡಿಕೊಂಡಿರುವುದರಿಂದ ಆಂಧ್ರಕ್ಕೆ ನೀರಿನ ಕೊರತೆಯಾಗಿದೆ. ಕರ್ನಾಟಕದ ರೈತರು ಐದು ಸಾವಿರ ಹೆಕ್ಟೇರ್‌ಗಿಂತ ಹೆಚ್ಚಿನ ನೀರಾವರಿ ಮಾಡಿಕೊಂಡಿದ್ದಾರೆ. ಆಂಧ್ರಕ್ಕೆ ಉದ್ದೇಶಿತ 85ಸಾವಿರ ಹೆಕ್ಟೇರ್ ಬದಲಿಗೆ 35 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆತಿದೆ ಎಂದು ಆಕ್ಷೇಪಿಸಿದರು.
ಆಕ್ಷೇಪ: ಆಂಧ್ರ ಸರ್ಕಾರವು ಜುರಾಲಾ ಅಣೆಕಟ್ಟೆಯ ಸಂಗ್ರಹಣಾ ಸಾಮರ್ಥ್ಯ 15 ಟಿಎಂಸಿಗೆ ನಿಗದಿ ಮಾಡಿತ್ತು. ಆದರೆ ಕರ್ನಾಟಕ ಸರ್ಕಾರ ಅದಕ್ಕೆ ಆಕ್ಷೇಪಿಸಿದ್ದರಿಂದ ಕೇವಲ 11 ಟಿಎಂಸಿ ನೀರು ಸಂಗ್ರಹಿಸುವಂತಾಗಿದೆ. 4 ಟಿಎಂಸಿ ನೀರಿನ ಕೊರತೆಯಾಗುತ್ತದೆ ಎಂದು ಹೇಳಿದರು. ಆಂಧ್ರದಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ನೆಟ್ಟಂಪಾಡು ಏತ ನೀರಾವರಿ ಯೋಜನೆಯನ್ನು ನದಿಯಲ್ಲಿ ಪ್ರವಾಹ ಸಂದರ್ಭ ವ್ಯರ್ಥ ಹರಿದು ಹೋಗುವ ನೀರಿನ ಬಳಕೆ ಉದ್ದೇಶದಿಂದ ನಿರ್ಮಿಸಲಾಗಿದೆ. ಈ ಬಗ್ಗೆ ಅಂತಾರಾಜ್ಯ ನೀರು ನಿರ್ವಹಣಾ ನಿಯಮವನ್ನು ಉಲ್ಲಂಘಿಸಲಾಗಿದೆ ಎಂದು ಕರ್ನಾಟಕದ ಆರೋಪದಲ್ಲಿ ಹುರುಳಿಲ್ಲ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement