ತಾತ್ಕಾಲಿಕ ಅಂಗಡಿಗಳ ಸಂಪೂರ್ಣ ತೆರವು
ಲಿಂಗಸ್ಗೂರು: ಪಟ್ಟಣದ ಬಸ್ ನಿಲ್ದಾಣದಿಂದ ಪದವಿ ಪೂರ್ವ ಕಾಲೇಜುವರೆಗಿನ ಮುಖ್ಯ ರಸ್ತೆ ಅಕ್ಕಪಕ್ಕದಲ್ಲಿ ತಾತ್ಕಾಲಿಕವಾಗಿ ಹಾಕಲಾಗಿದ್ದ ವಿವಿಧ ಬಗೆಯ ಅಂಗಡಿಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲಾಯಿತು.
ಸಹಾಯಕ ಆಯುಕ್ತ ಟಿ. ಯೋಗೇಶ ಹಾಗೂ ಪುರಸಭೆ ಮುಖ್ಯಾಧಿಕಾರಿ ಈರಣ್ಮ ಬಿರಾದಾರ ಸ್ಥಳಕ್ಕೆ ಆಗಮಿಸಿ ಪುರಸಭೆ ಸಿಬ್ಬಂದಿ ಹಾಗೂ ಕೂಲಿಕಾರ್ಮಿಕರು ಸೋಮವಾರ ಬೆಳಗ್ಗೆ ಬಸ್ ನಿಲ್ದಾಣದಿಂದ ಪದವಿ ಪೂರ್ವ ಕಾಲೇಜುವರೆಗಿನ ಮುಖ್ಯರಸ್ತೆ ಅಕ್ಕಪಕ್ಕ ತಾತ್ಕಾಲಿಕವಾಗಿ ಹಾಕಲಾಗಿದ್ದ ತರಕಾರಿ, ಹಣ್ಣಿನ ಅಂಗಡಿ, ಹೂವಿನ ಅಂಗಡಿ, ಹೊಟೇಲ್ ಸೇರಿದಂತೆ ವಿವಿಧ ಬಗೆಯ ಡಬ್ಬಾ ಅಂಗಡಿ ಹಾಗೂ ಶೆಡ್ಡುಗಳನ್ನು ಪೊಲೀಸ್ ಬಂದೋಬ ಸ್ತ್ ಮೂಲಕ ತೆರವುಗೊಳಿಸಿದರು. ನಂತರ ಜೆಸಿಬಿ ಯಂತ್ರದಿಂದ ಬಸ್ ನಿಲ್ದಾಣ ಕಾಂಪೌಂಡ್ ತೆರವುಗೊಳಿಸಲಾಯಿತು.
ಪದವಿ ಪೂರ್ವ ಕಾಲೇಜು ಕಾಂಪೌಂಡ್ನಲ್ಲಿ ಪುರಸಭೆಯಿಂದ 10್ಢ10 ಅಳತೆಯ ಸುಮಾರು 84 ಶೆಡ್ಡು ಅಂಗಡಿ ವ್ಯವಸ್ಥೆ ಕಲ್ಪಿಸಲಾಗುವುದು. ಇದರಲ್ಲಿ ಅಂಗಡಿ, ಹೋಟೆಲ್, ಹಣ್ಣಿನ ಅಂಗಡಿ ಅಥವಾ ಇತರೆ ವ್ಯಾಪಾರಕ್ಕೆ ಅನುಕೂಲ ಕಲ್ಪಿಸಲಾಗುವುದು. ಈ ಕುರಿತು ಈಗಾಗಲೇ ಅರ್ಜಿಗಳನ್ನು ಕರೆಯಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಈರಣ್ಣ ಬಿರಾದಾರ ತಿಳಿಸಿದರು. ಸಿಪಿಐ ಪಂಚಾಕ್ಷರಯ್ಯ, ಪುರಸಭೆ ಸಿಬ್ಬಂದಿ ಜಗನ್ನಾಥ ಇದ್ದರು.
--
ನೆರವು ಸಂಗ್ರಹ
ರಾಯಚೂರು: ನಗರದಲ್ಲಿ ಸೋಮವಾರ ಎಸ್ಯುಸಿಐಸಿ ಸಂಘಟನೆಯ ಜಿಲ್ಲಾ ಸಮಿತಿ ಕಾರ್ಯಕರ್ತರು ಉತ್ತರಾಖಂಡ ನಲ್ಲಿನ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಸಂಗ್ರಹಣೆ ಕಾರ್ಯ ನಡೆಸಿದರು. ವರ್ತಕರು ಉದಾರತೆ ಮೆರೆದಿದ್ದು, ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಡಾ. ಸುನೀತ್ ಕುಮಾರ್ ಅವರ ನೇತೃತ್ವದಲ್ಲಿ ದೇಣಿಗೆ ಸಂಗ್ರಹಿಸಲಾಯಿತು. ನಗರದ ಬಟ್ಟೆ ಬಜಾರ್, ಹರಿಹರ ರಸ್ತೆ ಮತ್ತಿತರೆಡೆಯ ಅಂಗಡಿಗಳ ವರ್ತಕರಿಂದ ಉತ್ತರಾಖಂಡ ಪ್ರವಾಹ ಸಂತ್ರಸ್ತರಿಗೆ ನೆರವು ಸಂಗ್ರಹಿಸಲಾಯಿತು.
ಇಂದು ನಿಧಿ ಸಂಗ್ರಹಣೆ: ಜಿಲ್ಲಾ ಬಿಜೆಪಿ ಘಟಕದಿಂದ ಜೂ.25 ರಂದು ನಗರದಲ್ಲಿ ಸಂತ್ರಸ್ತರ ಪರಿಹಾರ ನಿಧಿ ಸಂಗ್ರಹಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ನಗರದ ಬೆಳಗ್ಗೆ 9.30ಕ್ಕೆ ಸೂಪರ್ ಮಾರ್ಕೆಟ್ ಹತ್ತಿರ ಪಾಲ್ಗೊಳ್ಳುವಂತೆ ಜಿಲ್ಲಾಧ್ಯಕ್ಷ ತಿಳಿಸಿದ್ದಾರೆ.