ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬಿಸಿಯೂಟ; 28ಕ್ಕೆ ಪ್ರತಿಭಟನೆ

Lingaraj Badiger
Updated On : 25 Jun 2013, 11:58 am

ದೇವದುರ್ಗ: ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ತಾಲೂಕು ಸಮಿತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೂ.28ರಂದು ತಾಪಂ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಪ್ರಕಟಣೆ ನೀಡಿರುವ ಸಂಘದ ತಾಲೂಕು ಸಮಿತಿ ಅಧ್ಯಕ್ಷೆ ಮರಿಯಮ್ಮ, ತಾಲೂಕಿನ ಶಾಲೆಗಳು ಆರಂಭವಾಗಿ 26 ದಿನ ಕಳೆದರೂ ಬಿಸಿಯೂಟ ಕೇಂದ್ರಗಳಿಗೆ ಆಹಾರ ಧಾನ್ಯ ಮತ್ತು ಅಡುಗೆ ಅನಿಲ ಪೂರೈಕೆಯಾಗಿಲ್ಲ. ಬಿಸಿಯೂಟದ ನೌಕರರಿಗೆ ವೇತನ ಪಾವತಿಯಾಗಿಲ್ಲ ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೋರಾಟ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೃಷಿ ವಿವಿ; ಇಂದು ವಿಚಾರ ಸಂಕಿರಣ
ರಾಯಚೂರು: ನಗರದ ಕೃಷಿ ವಿವಿ ಪ್ರೇಕ್ಷಾಗೃಹದಲ್ಲಿ ಜೂ.25ರಂದು ಅಂಟಿನ ಚವಳಿಕಾಳು ಬೆಳೆಯ ಕುರಿತ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 10.30ಕ್ಕೆ ವಿಚಾರ ಸಂಕಿರಣವನ್ನು ರಾಯಚೂರು ಕೃಷಿ ವಿವಿ ಕುಲಪತಿ ಡಾ.ಬಿ.ವಿ.ಪಾಟೀಲ್ ಉದ್ಘಾಟಿಸಲಿದ್ದಾರೆ. ವಿಚಾರ ಸಂಕಿರಣದಲ್ಲಿ ಅಂಟಿನ ಚವಳಿಕಾಳು ಬೆಳೆ ಪರಿಚಯ, ಉಪಯೋಗಗಳು, ತಳಿಗಳು, ಬೇಸಾಯ ಕ್ರಮಗಳು, ಸಂಸ್ಕರಣೆ ಮತ್ತು ಮಾರುಕಟ್ಟೆ ಹಾಗೂ ಇತರ ವಿಷಯಗಳ ಕುರಿತು ವಿಷಯ ಮಂಡಿಸಲಾಗುತ್ತದೆ ಎಂದು ಕೃಷಿ ವಿವಿ ಪ್ರಕಟಣೆ ತಿಳಿಸಿದೆ.
ಸದಾಶಿವ ವರದಿ: 27ರಂದು ಧರಣಿ
ರಾಯಚೂರು: ಮಾದಿಗ ರಿಸರ್ವೇಶನ್ ಹೋರಾಟ ಸಮಿತಿಯಿಂದ ಜೂ.27 ರಂದು ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಧರಣಿ ಸತ್ಯಾಗ್ರಹ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 11ಕ್ಕೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಎಂಆರ್‌ಎಚ್‌ಎಸ್ ಸಂಘಟನೆಯಿಂದ ಈ ಹೋರಾಟ ಆಯೋಜಿಸಿದ್ದು, ಜಿಲ್ಲೆಯ ಎಲ್ಲ ತಾಲೂಕುಗಳಿಂದ ಮಾದಿಗ ರಿಸರ್ವೇಶನ್ ಹೋರಾಟ ಸಮಿತಿ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆಂದು ಪ್ರಕಟಣೆ ತಿಳಿಸಿದೆ.
ಸೇನಾ ರ್ಯಾಲಿ ಮುಂದೂಡಿಕೆ
ರಾಯಚೂರು: ರಾಜ್ಯದ ಚಿಕ್ಕಮಗಳೂರು ನಲ್ಲಿ ಜು.3ರಿಂದ ನಡೆಯಬೇಕಿದ್ದ ಸೇನಾ ಭರ್ತಿ ರ್ಯಾಲಿಯನ್ನು ಮುಂದೂಡಲಾಗಿದೆ. ಈ ಕುರಿತು ಗುಲ್ಬರ್ಗದ ಸೈನಿಕ ಕಲ್ಯಾಣ ಪುನಾರ್ವಸತಿ ಇಲಾಖೆಯ ಉಪನಿರ್ದೇಶಕರ ಕಚೇರಿಯು ಪ್ರಕಟಣೆ ನೀಡಿದ್ದು, ಜು.3ರಿಂದ 10ರವರೆಗೆ ನಡೆಯಬೇಕಿದ್ದ ಭರ್ತಿ ರ್ಯಾಲಿಯನ್ನು ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement