ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ವಿಕಲಚೇತನರ ಅರ್ಜಿ ಸಲ್ಲಿಕೆಗೆ ಜು.8 ನಿಗದಿ: ಯೋಗೇಶ

Lingaraj Badiger
Updated On : 25 Jun 2013, 11:57 am

ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ಜೂ.24
ತಾಲೂಕಿನ ವಿಕಲಚೇತನರು ಅರ್ಜಿ ಸಲ್ಲಿಕೆಗೆ ಜು.8ರಂದು ದಿನಾಂಕ ನಿಗದಿಪಡಿಸಲಾಗಿದ್ದು, ಸೂಕ್ತ ದಾಖಲಾತಿಯೊಂದಿಗೆ ಆಯಾ ಹೋಬಳಿ ನಾಡ ತಹಸೀಲ್ದಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕೆಂದು ಸಹಾಯಕ ಆಯುಕ್ತ ಟಿ. ಯೋಗೇಶ ತಿಳಿಸಿದರು.
ಸ್ತಳೀಯ ಸಹಾಯಕ ಆಯುಕ್ತರ ಕಚೇರಿಯಲ್ಲಿ ಸೋಮವಾರ ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಲಿಂಗಸ್ಗೂರು ತಹಸೀಲ್ ಕಚೇರಿ, ಗುರುಗುಂಟಾ, ಮುದಗಲ್, ಮಸ್ಕಿ, ಹಟ್ಟಿ ಸೇರಿದಂತೆ ವಿವಿಧ ನಾಡತಹಸೀಲ್ದಾರ್ ಕಚೇರಿಗಳಲ್ಲಿ ಜು.8 ರಂದು ವಿಕಲಾಂಧರು ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾಸಸ್ಥಳ, ಗುರುತಿನಚೀಟಿ, ವೈದ್ಯಕೀಯ ಪ್ರಮಾಣ ಪತ್ರ ಸೇರಿದಂತೆ ಸೂಕ್ತ ದಾಖಲಾತಿಯೊಂದಿಗೆ ಆಗಮಿಸಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಸರ್ಕಾರದಿಂದ ಪ್ರಮಾಣ ಪತ್ರ ನೀಡಲಾಗುವುದೆಂದು ಅವರು ತಿಳಿಸಿದರು.
ಸರ್ಕಾರದಿಂದ ದೊರೆಯುವ ಮಾಸಾಶನ ತಾಲೂಕಿನಲ್ಲಿ ವೃದ್ಧಾಪ್ಯ, ವಿಧವಾ ವೇತನ ಸೇರಿದಂತೆ ವಿವಿಧ ಯೋಜನೆ ಫಲಾನುಭವಿಗಳ ಜೊತೆ ಅಂಗವಿಕಲರ ಮಾಶಾಸನ ರದ್ಧುಗೊಳಿಸಲಾಗಿದೆ. ತಾಲೂಕಾದ್ಯಂತ ಸುಮಾರು 10ಕ್ಕೂ ಅಧಿಕ ವಿಕಲಚೇತನರಿದ್ದು, ಇವರು ಸರ್ಕಾರದ ಸೌಲತ್ತು ಪಡೆಯುವಲ್ಲಿ ವಂಚಿತರಾಗಿದ್ದಾರೆ. ಸರ್ಕಾರದ ಎಲ್ಲ ಇಲಾಖೆಗೆ ಬರುವ ಅನುದಾನದಲ್ಲಿ ಶೇ.3 ರಷ್ಟು ಮೀಸಲಾತಿ ಕಲ್ಪಿಸಬೇಕು. ವಿಕಲಚೇತನ ಅನುಷ್ಠಾನ ಸಮಿತಿ ರಚನೆ ಮಾಡಿ ಶೌಚಾಲಯ, ಕುಡಿಯುವ ನೀರು, ವಸತಿ ಸೇರಿದಂತೆ ವಿವಿಧ ಸೌಲತ್ತುಗಳನ್ನು ಒದಗಿಸಬೇಕು. ಪ್ರತಿ ಗ್ರಾಪಂನಲ್ಲಿ ಪ್ರತ್ಯೇಕ ಸ್ಥಳದ ವ್ಯವಸ್ಥೆ ಕಲ್ಪಿಸಬೇಕೆಂದು ಕರ್ನಾಟಕ ರಾಜ್ಯ ವಿಕಲಚೇತನರ ತಾಲೂಕ ಒಕ್ಕೂಟದ ಪದಾಧಿಕಾರಿಗಳು ಮನವಿ ಮಾಡಿದರು.
ಸಭೆಯಲ್ಲಿ ತಹಸೀಲ್ದಾರರಾದ ಎನ್.ಬಿ. ಪಾಟೀಲ್ ಹಾಗೂ ಎಸ್.ಬಿ. ಮಹಾಜನ್, ಸಿಡಿಪಿಒ ಪ್ರಭಾಕರ, ಆಹಾರ ಇಲಾಖೆ ಅಧಿಕಾರಿ ಕುಲ್ಕರ್ಣಿ, ದೈಹಿಕ ಶಿಕ್ಷಣಾಧಿಕಾರಿ ಬಸವರಾಜ ಮೂಲಿಮನಿ, ಎಪಿಎಂಸಿ ಕಾರ್ಯದರ್ಶಿ ರಂಗಣ್ಣ, ತಾಪಂ ಯೋಜನಾಧಿಕಾರಿ ಮಹಿಬೂಬ, ವೈದ್ಯಾಧಿಕಾರಿ ಡಾ. ಶ್ರೀನಿವಾಸುಲು, ವಿಕಲಚೇತರ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಕುಪ್ಪಣ್ಣ, ತಾಲೂಕು ಅಧ್ಯಕ್ಷ ಅಮರೇಶ ಪಾಟೀಲ ಐದಭಾವಿ, ಕಾರ್ಯದರ್ಶಿ ಅಬ್ದುಲ್ ಮಜೀದ್, ನಾಗರಾಜ, ಹುಸೇನಬಾಷಾ, ಸುರೇಶ ಭಂಡಾರಿ, ಶಿವಕುಮಾರ, ವಿರುಪಾಕ್ಷಯ್ಯ, ಸಂಗಮ್ಮ ಸೇರಿದಂತೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement