ಸದಸ್ಯತ್ವ ನೋಂದಣಿ ಅಭಿಯಾನ
ಸಿಂಧನೂರು: ತಾಲೂಕು ವೀರಶೈವ ಸಂಘಕ್ಕೆ ಹೊಸದಾಗಿ ಸದಸ್ಯತ್ವ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಅಶೋಕಗೌಡ ಗದ್ರಟಗಿ, ಮುಖಂಡ ಶಿವಕುಮಾರ ಜವಳಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಜೂ.27ರಂದು ನಗರದ ಸತ್ಯಾ ಗಾರ್ಡನ್‌ನಲ್ಲಿ ನಡೆಯುವ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಬಾಳೆಹೊನ್ನೂರು ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಅವರು ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಸದಸ್ಯತ್ವ ಹೊಂದ ಬಯಸುವವರು ಮಹಾಪೋಷಕರಿಗೆ 10ಸಾವಿರ, ಪೋಷಕರಿಗೆ 5ಸಾವಿರ, ಅಜೀವ ಸದಸ್ಯತ್ವಕ್ಕೆ 2ಸಾವಿರ, ವಾರ್ಷಿಕ ಸದಸ್ಯತ್ವಕ್ಕೆ 200 ಶುಲ್ಕ ನಿಗದಿಪಡಿಸಲಾಗಿದೆ. ಅಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ನಗರದ ಕೋಟೆ ಬಸವಕಲ್ಯಾಣ ಮಂಟಪದಲ್ಲಿ ನೋಂದಣಿ ಕಾರ್ಯ ನಡೆಯಲಿದ್ದು, ಆಸಕ್ತರು ಸದಸ್ಯತ್ವ ಪಡೆಯುವಂತೆ ಅವರು ಕೋರಿದ್ದಾರೆ.