ಇಂದು ನಾಟಕ ಪ್ರದರ್ಶನ
ರಾಯಚೂರು: ಸಮುದಾಯ ಸಂಸ್ಥೆಯಿಂದ ನಗರದಲ್ಲಿ ಜೂ.26ರಂದು ರಾಮಚಂದ್ರ ದೇವ ಇವರ ನಾಟಕ ರಥಮುಸಲ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ಸಂಜೆ 6.30ಕ್ಕೆ ನಗರದ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಾಟಕ ಪ್ರದರ್ಶನವನ್ನು ಸಮುದಾಯ ಸಂಸ್ಥೆಯ ರಾಜ್ಯ ಅಧ್ಯಕ್ಷ ಆರ್.ಕೆ. ಹುಡಗಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಮುದಾಯ ರಾಯಚೂರಿನ ಅಧ್ಯಕ್ಷ ವಿ.ಎನ್. ಅಕ್ಕಿ, ಅತಿಥಿಗಳಾಗಿ ಜಿಲ್ಲಾ ಕಸಾಪ ಅಧ್ಯಕ್ಷ ಮಹಾಂತೇಶ್ ಮಸ್ಕಿ ಪಾಲ್ಗೊಳ್ಳಲಿದ್ದಾರೆ.