ಐಟಿಐ ಸಿಬ್ಬಂದಿ ನೇಮಕಕ್ಕೆ ಆಗ್ರಹ
ಕನ್ನಡಪ್ರಭ ವಾರ್ತೆ ಲಿಂಗಸ್ಗೂರು ಜೂ.25
ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕ ಮಾಡುವಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ವತಿಯಿಂದ ವಿದ್ಯಾರ್ಥಿಗಳು ಮಂಗಳವಾರ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಕೈಗಾರಿಕಾ ತರಬೇತಿ ಸಂಸ್ಥೆ ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ಸ್ ಹಾಗೂ ಮೆಕ್ಯಾನಿಕಲ್ ಎಂಬ ಘಟಕ ಆರಂಭಿಸಲಾಗಿದೆ. ಆದರೆ ತರಬೇತಿ ಅಧಿಕಾರಿ, ಕಿರಿಯ ತರಬೇತಿ ಅಧಿಕಾರಿ, ಕಚೇರಿ ಸೂಪರ್ನಲ್, ಎಫ್ಡಿಎ, ವರ್ಕ್ ಶಾಪ್ ಅಟೆಂಡರ್, ಗ್ರೂಪ್ ಡಿ ಹುದ್ದೆಗಳ ಸಿಬ್ಬಂದಿ ಶೇ.40ರಷ್ಟು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ಇದರಿಂದ ತರಬೇತಿ ಆಡಳಿತ ಕೆಲಸ ಕಾರ್ಯಗಳು ತುಂಬಾ ವಿಳಂಬವಾಗುತ್ತಿವೆ ಹಾಗೂ ಯಾವುದೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲವೆಂದು ಆರೋಪಿಸಿದರು.
ಈ ಕುರಿತು ಹಿಂದಿನ ಸರ್ಕಾರದ ಸಚಿವರಿಗೆ, ಆಯುಕ್ತರಿಗೆ, ಜಂಟಿ ನಿರ್ದೇಶಕರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರಸ್ತುತ ಸಾಮಾನ್ಯ ವರ್ಗಾವಣೆಯಾದವರು ಸಂಸ್ಥೆಗೆ ಸಿಬ್ಬಂದಿ ನೇಮಿಸಿ ಅಭಿವೃದ್ಧಿಯತ್ತ ಗಮನ ಹರಿಸಬೇಕು. ಸದರಿ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ವರ್ಗಾವಣೆ ಮಾಡಬಾರದೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ವೇಳೆ ಎಸ್ಎಫ್ಐ ಜಿಲ್ಲಾಧ್ಯಕ್ಷ ಎಸ್.ರಂಗನಾಥ, ತಾಲೂಕು ಕಾರ್ಯದರ್ಶಿ ವೀರಭದ್ರ, ಹಟ್ಟಿ ಅಧ್ಯಕ್ಷ ಪ್ರಶಾಂತ, ಯಲ್ಲಪ್ಪ, ರಮೇಶ, ಭೀಮಣ್ಣ, ಸುನಿಲ್, ಚಂದ್ರಕಾಂತ, ಶರಣಬಸವ, ಲಕ್ಕಪ್ಪ, ಶಿವಕುಮಾರ, ಅಮರೇಶ, ನಿಂಗಪ್ಪ, ರವಿಶಂಕರ ಸೇರಿದಂತೆ ಇದ್ದರು.