ನಾಳೆ ಜಿಲ್ಲಾ 'ಲೋಕಾ' ಪ್ರವಾಸ
ರಾಯಚೂರು: ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಜೂ.27ರಂದು ಸಿಂಧನೂರಿನಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಲೋಕಾಯುಕ್ತ ಕಚೇರಿಯು ಅಂದು ಬೆಳಗ್ಗೆ 10ರಿಂದ ಮ.1ರ ವರೆಗೆ ಸಿಂಧನೂರಿನ ಪ್ರವಾಸಿ ಮಂದಿರ ಹಾಗೂ ಅದೇ ದಿನ ಮ.3ಕ್ಕೆ ಮಾನವಿಯಲ್ಲಿ ಲೋಕಾಯುಕ್ತರು ಸಾರ್ವಜನಿಕರಿಂದ ಕುಂದುಕೊರತೆಗಳನ್ನು ಸ್ವೀಕರಿಸಲಿದ್ದಾರೆ ಎಂದು ತಿಳಿಸಿದೆ.
ದ್ವಿತೀಯ ಪಿಯು
ಪ್ರವೇಶ ಪತ್ರ; ಸೂಚನೆ
ರಾಯಚೂರು: ಜಿಲ್ಲೆಯಲ್ಲಿ ಜು. 3ರಿಂದ ಆರಂಭವಾಗುವ ದ್ವಿತೀಯ ಪಿಯು ಪೂರಕ ಪರೀಕ್ಷೆ ಪ್ರವೇಶ ಪತ್ರಗಳನ್ನು ಕಾಲೇಜುಗಳಿಗೆ ರವಾನಿಸಿದ್ದು, ಅಭ್ಯರ್ಥಿಗಳು ಪ್ರವೇಶ ಪತ್ರ ಪಡೆಯಲು ಸೂಚಿಸಲಾಗಿದೆ. ಪ್ರವೇಶ ಪತ್ರಗಳನ್ನು ವಿದ್ಯಾರ್ಥಿಗಳು ಪದವಿ ಪೂರ್ವ ಕಾಲೇಜುಗಳಿಂದ ಜೂ.25ರಿಂದ ಪಡೆಯಲು ಡಿಡಿಪಿಯು ತಿಳಿಸಿದ್ದಾರೆ.