ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಪದಾಧಿಕಾರಿಗಳ ನೇಮಕ

Rashmi Kasaragodu
Updated On : 26 Jun 2013, 11:31 am

ಸಿಂಧನೂರು: ನಗರದ ಸತ್ಯಾ ಗಾರ್ಡನ್ನಲ್ಲಿ ನಡೆದ ಬಿಜೆಪಿ ವಿಶೇಷ ಸಭೆ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯ ಹಾಲಪ್ಪಾಚಾರ್ ಸಿಂಧನೂರು ತಾಲೂಕಿನ 7ಶಕ್ತಿ ಕೇಂದ್ರಗಳ ಪದಾಧಿಕಾರಿಗಳನ್ನು ಈ ಕೆಳಕಂಡಂತೆ ನೇಮಕ ಮಾಡಿದ್ದಾಗಿ ಸಭೆಯಲ್ಲಿ ಘೋಷಿಸಿದ್ದಾರೆ. ಜಾಲಿಹಾಳ ಪ್ರಮುಖರಾಗಿ ರಾಮಚಂದ್ರರಾವ್, ಸಹ ಪ್ರಮುಖರಾಗಿ ರೇಣುಕಪ್ಪ ಬಸಾಪುರ, ರೌಡಕುಂದಾ ಪ್ರಮುಖರಾಗಿ ಅಂಬಣ್ಣ ನಾಯಕ, ಸಹಪ್ರಮುಖರಾಗಿ ಮಲ್ಲೇಶ್ವರರಾವ್, ಸಾಲಗುಂದಾ ಪ್ರಮುಖರಾಗಿ ಹನುಮೇಶ, ಸಹ ಪ್ರಮುಖರಾಗಿ ಅಮ್ಮಿರಾಜು, ಗುಡದೂರು ಪ್ರಮುಖರಾಗಿ ಕಲ್ಲೂರು ಬಸಪ್ಪ, ಸಹಪ್ರಮುಖರಾಗಿ ಕಂಡೇಶ, ರಾಗಲಪರ್ವಿ ಪ್ರಮುಖರಾಗಿ ದೇವೇಂದ್ರಪ್ಪ ಯಾಪಲಪರ್ವಿ, ಸಹಪ್ರಮುಖರಾಗಿ ಚನ್ನನಗೌಡ, ಬಾದರ್ಲಿ ಪ್ರಮುಖರಾಗಿ ಹನುಮೇಶ ನಾಯಕ ಹರೇಟನೂರು, ಸಹಪ್ರಮುಖರಾಗಿ ಪ್ರಣಬ್ ಬಾಲಾ, ಸಿಂಧನೂರು ನಗರ ಪ್ರಮುಖರಾಗಿ ಮಧ್ವರಾಜ್ ಆಚಾರ್, ಸಹ ಪ್ರಮುಖರಾಗಿ ಸುಬ್ಬಾರಾವ್ ನೇಮಕಗೊಂಡಿದ್ದಾರೆ ಎಂದು ತಿಳಿಸಿದರು. ಈ ಎಲ್ಲ ಶಕ್ತಿ ಕೇಂದ್ರಗಳ ಪ್ರಮುಖರು ಹಾಗೂ ಸಹ ಪ್ರಮುಖರು, ತಮ್ಮ ಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ತಾಲೂಕಾಧ್ಯಕ್ಷರ ನೇಮಕಕ್ಕೆ ಪೂರಕವಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಕನಕದಾಸ ಶಾಲಾ ಸಂಸತ್ತು ರಚನೆ
ಸಿಂಧನೂರು: ನಗರದ ಕನಕದಾಸ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವ ದೃಷ್ಟಿಯಿಂದ ಶಾಲಾ ಸಂಸತ್ತು ರಚನೆ ಮಾಡಲಾಗಿದೆ ಎಂದು ಶಾಲೆ ಮುಖ್ಯೋಪಾಧ್ಯಾಯ ಮಲ್ಲಿಕಾರ್ಜುನ ಕುರುಕುಂದಾ ತಿಳಿಸಿದ್ದಾರೆ. ಮುಖ್ಯಮಂತ್ರಿಯಾಗಿ ಶ್ರೀನಿವಾಸ ಮೂಕಣ್ಣ, ಶಿಕ್ಷಣ ಮಂತ್ರಿಯಾಗಿ ಸೋಮಶೇಖರ ಹನುಮಂತ, ಕ್ರೀಡಾಮಂತ್ರಿಯಾಗಿ ಮಲ್ಲಪ್ಪ ಗೋರ್ಜಪ್ಪ, ಸಾಂಸ್ಕೃತಿಕ ಮಂತ್ರಿಯಾಗಿ ಹಂಪಮ್ಮ ಮಲ್ಲಪ್ಪ, ಪ್ರವಾಸ ಮಂತ್ರಿಯಾಗಿ ನಿರುಪಾದಿ ಹಿರೇಲಿಂಗಪ್ಪ, ಆರೋಗ್ಯ ಮಂತ್ರಿಯಾಗಿ ದೇವರಾಜ ಹಿರೇಲಿಂಗಪ್ಪ, ಸ್ವಚ್ಛತಾ ಮಂತ್ರಿಯಾಗಿ ಮಲ್ಲಪ್ಪ ಶರಣಪ್ಪ, ಮಹಿಳಾ ಪ್ರತಿನಿಧಿಯಾಗಿ ಹನುಮಮ್ಮ ಶರಣಪ್ಪ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಕೆ. ವಿರುಪಾಕ್ಷಪ್ಪ, ಆಳಿತಾಧಿಕಾರಿ ಎಂ. ದೊಡ್ಡ ಬಸವರಾಜ, ವ್ಯವಸ್ಥಾಪಕ ಭೀಮಾಜಿ ಕುಲಕರ್ಣಿ ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.
ಇಂದು ಕೃಷಿ ದರ್ಶನ
ಗುಲ್ಬರ್ಗ: ಗುಲ್ಬರ್ಗ ದೂರದರ್ಶನ ಕೇಂದ್ರವು ಜೂ.26ರಂದು ಸಂಜೆ 5.30ರಿಂದ 6ರವರೆಗೆ ಕೃಷಿ ದರ್ಶನ ಕಾರ್ಯಕ್ರಮದಲ್ಲಿ ರೈತ ಬಾಂಧವರಿಗಾಗಿ ನೇರ ಫೋನ್ ಇನ್ ಕಾರ್ಯಕ್ರಮ ಆಯೋಜಿಸಲಾಗಿದೆ. ರಾಯಚೂರು ಕೃಷಿ ಸಂಶೋಧನಾ ಕೇಂದ್ರದ ಯೋಜನಾ ನಿರ್ದೇಶಕ ಡಾ. ಎಂ.ಬಿ. ಪಾಟೀಲ್ ಅವರು ನಿಖರ ಕೃಷಿ ಕುರಿತು ಮಾತನಾಡಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement