ಬಾಲಕಾರ್ಮಿಕ ವಿರೋಧಿ ದಿನಾಚರಣೆ ಜಾಥಾ
ದೇವದುರ್ಗ: ಮಕ್ಕಳ ದುಡಿಮೆಯಿಂದ ಭವಿಷ್ಯ ಬದಲಾಗದು. ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಮಕ್ಕಳಿಗೆ ಶಿಕ್ಷಣ ನೀಡುವುದು ಹೆಚ್ಚು ಸೂಕ್ತ ಎಂದು ಸಿಪಿಐ ಅಲಿಸಾಬ್ ಹೇಳಿದರು.
ಅವರು ಈಚೆಗೆ ಪಟ್ಟಣದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆ ಮತ್ತು ಸಮಾಜ ಸೇವಾ ಸಂಸ್ಥೆಗಳಿಂದ ಜಂಟಿಯಾಗಿ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಅಂಗವಾಗಿ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, 14ಛ ವರ್ಷದೊಳಗಿನ ಎಲ್ಲಾ ಮಕ್ಕಳನ್ನು ಶಾಲೆಗೆ ಕಳಿಸುವಂತೆ ಅವರು ಮನವಿ ಮಾಡಿದರು.
ಬಸವೇಶ್ವರ ವಿದ್ಯಾ ಸಂಸ್ಥೆಯ ದಾವಲಸಾಬ್ ಬಂಡಿ, ವೀರೇಶ್, ಹೆಲ್ಪ್ ಎ ಚೈಲ್ಡ್ ಆಫ್ ಇಂಡಿಯಾ ಸಂಸ್ಥೆಯ ಬೆಟ್ಟರಾಯನ್, ಕಾರುಣ್ಯ ಚಾರಿಟೇಬಲ್ ಟ್ರಸ್ಟ್ನ ಅನಿತಾ ಇಮಾನುವೇಲ್, ಡಾನ್ ಬಾಸ್ಕೋ ಸಮಾಜ ಸೇವೆ ಸಂಸ್ಥೆ, ಸಮೂಹ ಸಂಸ್ಥೆ, ಕ್ರಿಸ್ತ ದಿವ್ಯ ಜ್ಯೋತಿ ಟ್ರಸ್ಟ್ ಹಾಗೂ ಯುನಿಸೆಫ್ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.