ಬಿಜೆಪಿ; ಪರಿಹಾರ ನಿಧಿ ಸಂಗ್ರಹ
ಆಳಂದ: ಭಾರತೀಯರ ಪವಿತ್ರ ತೀರ್ಥಕ್ಷೇತ್ರ ಕೇದಾರನಾಥ ಮತ್ತು ಬದ್ರಿನಾಥ ಒಳಗೊಂಡು ಉತ್ತರಾಖಂಡದಲ್ಲಿ ಸಂಭವಿಸಿದ ಮೇಘಸ್ಫೋಟದಿಂದ ಸಂತ್ರಸ್ತರಿಗಾಗಿ ಸ್ಥಳೀಯ ಬಿಜೆಪಿ ಅಧ್ಯಕ್ಷ ರಮೇಶ ಲೋಹಾರ ನೇತೃತ್ವದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಮಂಗಳವಾರ ಸಾರ್ವಜನಿಕರಿಂದ 30 ಸಾವಿರ ನಿಧಿ ಸಂಗ್ರಹಿಸಿದರು.
ಇಲ್ಲಿನ ಶರಣ ಏಕಾಂತರಾಮಯ್ಯನ ಮಂದಿರದಿಂದ ಹೊರಟು ಬಸ್ ನಿಲ್ದಾಣ ರಸ್ತೆ, ರಜ್ವಿರೋಡ, ತಹಸೀಲ್ದಾರ್ ಕಚೇರಿ ಮುಖ್ಯರಸ್ತೆಯ ಮೂಲಕ ಓಡಾಡಿ ಸಾರ್ವಜನಿಕರಿಂದ ನಿಧಿ ಸಂಗ್ರಹಿಸಿ ಬಳಿಕ ಪಕ್ಷದ ಜಿಲ್ಲಾಧ್ಯಕ್ಷರಿಗೆ ಕಳುಹಿಸಿಕೊಟ್ಟರು.
ಪಕ್ಷದ ಅಧ್ಯಕ್ಷ ರಮೇಶ ಲೋಹಾರ, ಬಸವರಾಜ ಪವಾಡಶೆಟ್ಟಿ, ಗುಪ್ತಲಿಂಗ ಬಿರಾದಾರ, ರೇವಣಸಿದ್ಧ ಪಟ್ನೆ, ಕಾಶಿನಾಥ ಅಣದುರ್ಗೆ, ಮಲ್ಲಿನಾಥ ಒಡೆಯರ್, ಸಂಜಯ ಮಿಸ್ಕಿನ್, ಮಲ್ಲಿಕಾರ್ಜುನ ಸುತಾರ, ಮಹೇಶ ಸೂರೆ, ಮೋತಿರಾಮ ಪವಾರ, ತಿಪ್ಪೇರುದ್ರಸ್ವಾಮಿ, ಪ್ರಕಾಶ ಮಾನೆ, ಬಾಬಾಸಾಹೇಬ್ ಕಾಮನಕರ್, ಶಿವಾನಂದ ಉಪ್ಪಿನ್ ಸೇರಿದಂತೆ ಇತರರು ನಿಧಿ ಸಂಗ್ರಹ ಕಾರ್ಯದಲ್ಲಿ ಪಾಲ್ಗೊಂಡಿದ್ದರು.