ಇಂದು ಜಿಲ್ಲೆಗೆ ಸಚಿವರ ಭೇಟಿ
ರಾಯಚೂರು: ರಾಜ್ಯ ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ ಅವರು ಜೂ.27ರಂದು ನಗರಕ್ಕೆ ಆಗಮಿಸಲಿದ್ದಾರೆ. ಅಂದು ಬೆಳಗ್ಗೆ ನಗರಕ್ಕೆ ಆಗಮಿಸುವ ಅವರು, ಬೆಳಗ್ಗೆ 8ಕ್ಕೆ ದೇವದುರ್ಗಕ್ಕೆ ತೆರಳಿ ಅಲ್ಲಿ ಶ್ರೀಗುರು ರಾಮಲಿಂಗೇಶ್ವರ ಸೌಹಾರ್ದ ಪತ್ತಿನ ಸಹಕಾರಿ ಸಂಘದ ದೇವದುರ್ಗ ಶಾಖೆಯನ್ನು ಉದ್ಘಾಟಿಸಲಿದ್ದಾರೆ. ನಂತರ ಅವರು ನಗರಕ್ಕೆ ಮರಳಿ ಮಧ್ಯಾಹ್ನ 1.15ಕ್ಕೆ ರಾಯಚೂರು ಜಿಲ್ಲಾ ಸಹಕಾರಿ ಬ್ಯಾಂಕಿಗೆ ಭೇಟಿ ನೀಡಲಿದ್ದಾರೆ. ಸಹಕಾರಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 3ಕ್ಕೆ ಸೌಹಾರ್ದ ಸಹಕಾರ ಸಂಘಗಳ ಕುರಿತು ಸಂವಾದದಲ್ಲಿ ಭಾಗವಹಿಸುವರು. ಸಂಜೆ 5ಕ್ಕೆ ಭ್ರಮರಾಂಬ ಪತ್ತಿನ ಸೌಹಾರ್ದ ಸಹಕಾರಿ ಶಾಖೆ ಉದ್ಘಾಟಿಸಿ ರಾತ್ರಿ 9.45ಕ್ಕೆ ಬೆಂಗಳೂರಿಗೆ ಮರಳಲಿದ್ದಾರೆಂದು ತಿಳಿಸಿದೆ.