ಕೊಲೆ ಆರೋಪಿ ಬಂಧನಕ್ಕೆ ಕೊರವರ ಸಂಘ ಆಗ್ರಹ
ಕನ್ನಡಪ್ರಭ ವಾರ್ತೆ, ಸಿಂಧನೂರು, ಜೂ.26
ಮಾನವಿ ತಾಲೂಕಿನ ಅತ್ತನೂರ ಗ್ರಾಮದ ಮುದುಕಪ್ಪ ಕೊರವರ ಎಂಬುವರನ್ನು ಕೊಲೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿ ಸಿಂಧನೂರ ತಾಲೂಕಾ ಕೊರವರ ಸಮಾಜದವರು ತಹಸೀಲ್ದಾರ್ ಬಿ.ಟಿ. ಕುಮಾರಸ್ವಾಮಿಗೆ ಮನವಿ ಪತ್ರ ಸಲ್ಲಿಸಿದರು.
ಕೊಲೆಯಾಗಿರುವ ಮುದುಕಪ್ಪ ಕೊರವರ ಹೆಂಡತಿಗೆ ಸರ್ಕಾರಿ ನೌಕರಿ, ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಸೂಕ್ತ ರಕ್ಷಣೆ ಒದಗಿಸಬೇಕು. ಆರೋಪಿಗಳಾದ ವೀರೇಶ, ಮಹಾದೇವಪ್ಪ, ರಾಚಪ್ಪ, ನಾಗರಾಜ, ಭೀಮ, ಬಸವರಾಜ, ಮಹೇಶ, ನಾಗರಾಜ ಹಣಗಿ ಅವರನ್ನು ಬಂಧಿಸಿ ಕಠಿಣ ಶಿಕ್ಷೆ ನೀಡುವಂತೆ ತಾಲೂಕಾಧ್ಯಕ್ಷ ಕೆ.ಎಸ್. ಮರಿಯಪ್ಪ ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಾಲೂಕಾ ಪ್ರಧಾನ ಕಾರ್ಯದರ್ಶಿ ಡಿ.ಕೆ. ಶಿವರಾಜ, ಪದಾಧಿಕಾರಿಗಳಾದ ಬಾಲಪ್ಪ ಮನ್ನಾಪೂರ, ಮರಿಯಪ್ಪ ತುರಡಗಿ, ರಾಮಕೃಷ್ಣ ಭಜಂತ್ರಿ, ಸುರೇಶ ಜಾದವ, ಹುಲಗಪ್ಪ ತುರಡಗಿ, ಯಮನಪ್ಪ ಒಗಲಕುಂಟಿ, ಮರಿಯಪ್ಪ ಬರಗೂರ ಮತ್ತಿತರರು ಪಾಲ್ಗೊಂಡಿದ್ದರು.