ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕ್ರಿಯಾಶೀಲತೆಯಿಂದ ಸಾಧನೆ: ಕುಮಾರಸ್ವಾಮಿ

Lingaraj Badiger
Updated On : 27 Jun 2013, 11:04 am

ಸಿಂಧನೂರು: ಆಂಗ್ಲ ಮಾಧ್ಯಮದಲ್ಲಿ ಅಭ್ಯಾಸ ಮಾಡಿದರೆ ಮಾತ್ರ ಮಕ್ಕಳು ಪ್ರತಿಭಾವಂತರಾಗುತ್ತಾರೆನ್ನುವ ಕಲ್ಪನೆ ಸರಿಯಲ್ಲ. ಜೀವನದಲ್ಲಿ ಉತ್ತಮ ಗುರಿ ಇಟ್ಟುಕೊಂಡು ಸತತ ಶ್ರದ್ಧೆ, ನಿರಂತರ ಪ್ರಯತ್ನದಿಂದ ಕ್ರಿಯಾಶೀಲರಾದರೆ ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ತಹಸೀಲ್ದಾರ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ನಗರದ ವೆಂಕಟೇಶ್ವರ ಪ್ರೌಢಶಾಲೆಯಲ್ಲಿ ತಾಲೂಕ ದಲಿತ ಸೇನೆ ಮತ್ತು ಸಿಂಧೂರ ಪ್ರಜಾ ರಕ್ಷಣಾ ಸೇನೆ
ಜಂಟಿ ಸಂಯುಕ್ತಾಶ್ರಯದಲ್ಲಿ ಬಡವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಣೆ, ಪ್ರತಿಭಾವನ್ವಿತರಿಗೆ ಪುರಸ್ಕಾರ ಹಾಗೂ ವಿಜ್ಞಾನ ಶಿಕ್ಷಕ ಎಸ್.ಕೆ. ಹೊಟ್ಟಿನ್ ಅವರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಭಾಷೆ ಅಡ್ಡಿಯಲ್ಲ: ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಉನ್ನತ ಹುದ್ದೆಯಲ್ಲಿ ಇರುವ ಬಹುತೇಕರು ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಯಲ್ಲೇ ವಿದ್ಯಾಭ್ಯಾಸ ಮಾಡಿದ್ದಾರೆ. ತಾವೂ ಸಹ ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಅಭ್ಯಾಸ ಮಾಡಿ ಶಿಕ್ಷಕರಾಗಿ ಮುಕ್ತ ವಿಶ್ವವಿದ್ಯಾಯಲದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪಡೆದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ತಹಸೀಲ್ದಾರರಾಗಿರುವುದಾಗಿ ವಿವರಿಸಿದರು.
ಸಮಾರಂಭ ಉದ್ಘಾಟಿಸಿದ ಮಕ್ಕಳ ತಜ್ಞ ಡಾ.ಕೆ. ಶಿವರಾಜ ಹೈ-ಕ 3500 ಶಿಕ್ಷಕರು ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದಾರೆ. ಅವರೆಲ್ಲ ಬೇರೆಡೆ ವರ್ಗವಾದರೆ ಈ ಭಾಗದ ಶೈಕ್ಷಣಿಕ ಪರಿಸ್ಥಿತಿ ಏನು ಎಂದು ಕಳವಳ ವ್ಯಕ್ತಪಡಿಸಿದರು. ಹೈ.ಕ 371 (ಜೆ) ಕಲಂ ತಿದ್ದುಪಡಿ ನಂತರವಾದರೂ, ಈ ಜ್ವಲಂತ ಸಮಸ್ಯೆಗೆ ಪರಿಹಾರ ಸಿಗಬೇಕಾಗಿದೆ. ವೆಂಕಟೇಶ್ವರ ಪ್ರೌಢಶಾಲೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಬಿಎಸ್‌ಆರ್ ಕಾಂಗ್ರೆಸ್ ಮುಖಂಡ ಕೆ. ಕೆರಿಯಪ್ಪ, ನಗರಸಭೆ ಸದಸ್ಯ ಕೆ. ಮರಿಯಪ್ಪ, ದಸ್ತಾವೇಜು ಬರಹಗಾರ ವೆಂಕಣ್ಣ ಜೋಷಿ, ಶಾಲಾ ಮುಖ್ಯೋಪಾಧ್ಯಾಯ ಗಂಗನಗೌಡ ಪಾಟೀಲ್, ಬಸವ ಯೋಗ ಸಮಿತಿ ಅಧ್ಯಕ್ಷ ಶಿವಣ್ಣ ಹ. ಸಣ್ಣಪ್ಪನವರ, ದಲಿತ ಮುಖಂಡ ಪಂಪಾಪತಿ ಗುಡದೂರು, ಯುವ ಮುಖಂಡ ಹನುಮಂತ ಗೊರೇಬಾಳ, ಪ್ರಜಾರಕ್ಷಣಾ ಸೇನೆ ಕಾರ್ಯಾಧ್ಯಕ್ಷ ಕೆ. ಬಸವರಾಜ ಮತ್ತಿತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ದಲಿತ ಸೇನೆ ಅಧ್ಯಕ್ಷ ನಾಗರಾಜ ಬೊಮ್ಮನಾಳ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೆಂಕನಗೌಡ ವಟಗ ಲ್ ನಿರೂಪಿಸಿದರು. ಎಚ್.ಎಫ್. ಮಸ್ಕಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement