ಮಾನಸಿಕ, ಬೌದ್ಧಿಕ ಸ್ವಾಸ್ಥ್ಯಕ್ಕೆ ಯೋಗ ಅವಶ್ಯ
ಮಸ್ಕಿ: ಮಸ್ಕಿಯ ಪತಂಜಲಿ ಯೋಗ ಸಮಿತಿ ಹಾಗೂ ಮಹಾಮನೆ ಸಮಿತಿ ಮಸ್ಕಿ ವತಿಯಿಂದ ಈಚೆಗೆ ಶ್ರೀ ಭ್ರಮರಾಂಬ ದೇವಸ್ಥಾನದಲ್ಲಿ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶಾಸಕ ಪ್ರತಾಪಗೌಡ ಪಾಟೀಲ್ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ, ಮಾನಸಿಕ ಹಾಗೂ ಭೌದ್ಧಿಕ ಆರೋಗ್ಯ ವೃದ್ಧಿಗೆ ಯೋಗ ಅವಶ್ಯಕವಾಗಿದ್ದು ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಯೋಗಾಭ್ಯಾಸ ಅಳವಡಿಸಿಕೊಳ್ಳಲು ಕರೆ ನೀಡಿದರು.
ಯೋಗ ಶಿಬಿರವನ್ನು ಪತಂಜಲಿ ಯೋಗಸವುತಿ ಗುರು ಬಸವರಾಜ ಪೂಜಾರ ನಡೆಸಿಕೊಟ್ಟರು. ಯೋಗ ಸಮಿತಿ ಅಧ್ಯಕ್ಷ ಸುಕುಮುನಿಯಪ್ಪ ನಾಯಕ, ಕಾರ್ಯದರ್ಶಿ ಲಕ್ಷ್ಮೀ ನಾರಾಯಣ, ಮಲ್ಲಿಕಾರ್ಜುನ ಕಂದಗಲ್, ಬಸವರಾಜ ಮಿಟ್ಟಿಮನೆ, ಚನ್ನಪ್ಪ ಯಂಬಲದ, ಮಹಾಮನೆ ಅಧ್ಯಕ್ಷ ಪ್ರಕಾಶ ಶೇಠ್ ಧಾರಿವಾಲ್, ಡಾ. ಶಿವಶರಣಪ್ಪ ಇತ್ಲಿ, ಡಾ.ಬಿ.ಎಚ್. ದಿವಟರ್, ಅಂದಾನಪ್ಪ ಗುಂಡಳ್ಳಿ ಸೇರಿ ಅನೇಕರಿದ್ದರು.